ಕಾಸರಗೋಡು : ಆಲ್ ಕೇರಳ ಫೆÇೀಟೊಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕಾಸರಗೋಡು ಪೂರ್ವ ಘಟಕ ಸಮಿತಿಯು ವಿಶ್ವ ಜಲ ದಿನದ ಅಂಗವಾಗಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೇಸಿಗೆಯಲ್ಲಿ ಪಕ್ಷಿ, ಪ್ರಾಣಿಗಳಿಗೆ ಸುಲಭವಾಗಿ ನೀರು ಲಭ್ಯವಾಗಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಘಟಕದ ಹಿರಿಯ ಸದಸ್ಯ ಹಾಗೂ ಮಾಜಿ ರಾಜ್ಯ ಕಾರ್ಯದರ್ಶಿ ಗೋವಿಂದನ್ ಅವರ ಶಂಕರನ್‍ಕಾಟ್ 'ಭಾವನಾ' ವಠಾರದಲ್ಲಿ ಪಕ್ಷಿಗಳಿಗೆ ನೀರುಣಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಘಟಕದ ಅಧ್ಯಕ್ಷ ಅಜಿತ್, ಕೋಶಾಧಿಕಾರಿ ಮನೀಶ್, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ವಾಮನ್ ಕುಮಾರ್, ಘಟಕದ ಉಪಾಧ್ಯಕ್ಷ ಅಖಿಲ್ ಮತ್ತು ಜಿಲ್ಲಾ ನೇಚರ್ ಕ್ಲಬ್ ಮಾಜಿ ಸಂಯೋಜಕ ದಿನೇಶ್ ಇನ್‍ಸೈಟ್ ನೇತೃತ್ವ ವಹಿಸಿದ್ದರು.