ಮಂಜೇಶ್ವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಜ್ಞಾನದೀಪ ಯೋಜನೆಯ ವತಿಯಿಂದ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಜುರಾದ ಪೀಠೋಪಕರಣಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಶುಕ್ರವಾರ ಶಾಲೆಯಲ್ಲಿ ನಡೆಯಿತು. ಯೋಜನಾಧಿಕಾರಿ ಶಶಿಕಲಾ ಸುವರ್ಣ ಉದ್ಘಾಟಿಸಿದರು.
ಶಾಲಾ ಸಂಚಾಲಕ ವಂ.ಫಾ.ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಜನ ಜಾಗೃತಿ ವೇಧಿಕೆಯ ಅಧ್ಯಕ್ಷ ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ, ಗ್ರಾಮಾಭಿವೃದ್ದಿ ಯೋಜನೆಯ ವಲಯ ನಿರ್ಧೇಶಕ ಕೃಷ್ಣಪ್ಪ, ಪದಾಧಿಕಾರಿ ದಿನೇಶ್, ಹರ್ಷಾದ್ ವರ್ಕಾಡಿ, ಪಿಟಿಎ ಅಧ್ಯಕ್ಷ ಸೀತಾರಾಮ ಬೇರಿಂಜ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಸ್ವಾಗತಿಸಿ, ಕ್ಲಾರಾ ಡಿಸೋಜ ವಂದಿಸಿದರು. ಭಗಿನಿ ಸೆವ್ರಿನ್ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.