ಲಾಹೋರ್: ಯುದ್ಧದ ಸಮಯವನ್ನು ಹೊರತುಪಡಿಸಿ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ.
ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಆಯಂಡ್ ಕನೆಕ್ಟಿವಿಟಿ (ಐಪಿಎಸಿ) ಗುರುವಾರ ಆಯೋಜಿಸಿದ್ದ 'ಪಾಕಿಸ್ತಾನ-ಭಾರತ ಸಂಬಂಧಗಳ ಪ್ರಸ್ತುತ ಪರಿಸ್ಥಿತಿ ಮತ್ತು ಮುಂದಿನ ದಾರಿ' ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, 'ಬಾಕಿ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಎರಡು ದೇಶಗಳಿಗೆ ಮಾತುಕತೆಯೊಂದೇ ಪರಿಹಾರ' ಎಂದು ತಿಳಿಸಿದರು.
ನಾಲ್ಕು ಅಂಶಗಳ ಸೂತ್ರದ ರೂಪದಲ್ಲಿ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯ ಸಂಭವನೀಯ ಪರಿಹಾರಕ್ಕೆ ಈಗಾಗಲೇ ಒಪ್ಪಲಾಗಿದೆ. ಎರಡೂ ದೇಶಗಳ ನಡುವಿನ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸದೇ ಇದ್ದರೆ ಅದು ವಿಷಾದನೀಯ ಎಂದು ಹೇಳಿದರು.