ನಕಲಿ ಪೋಟೋಗಳನ್ನು ಗುರುತಿಸಲು ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಬಳಕೆದಾರರಿಗೆ ಸಹಾಯ ಮಾಡುವ ಉದ್ದೇಶದಿಂದ ವಾಟ್ಸಾಪ್ ಹೊಸ ರಿವರ್ಸ್ ಇಮೇಜ್ ಸರ್ಚ್ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ.
ಇದು ಬಳಕೆದಾರರಿಗೆ ಚಿತ್ರಗಳನ್ನು ತ್ವರಿತವಾಗಿ ಗೂಗಲ್ ಗೆ ಅಪ್‍ಲೋಡ್ ಮಾಡಲು ಮತ್ತು ಅಪ್ಲಿಕೇಶನ್‍ನಿಂದ ನೇರವಾಗಿ ಅವುಗಳ ದೃಢೀಕರಣವನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಈ ವೈಶಿಷ್ಟ್ಯವು ವಾಟ್ಸಾಪ್ ನಲ್ಲಿಯೇ ಲಭ್ಯವಿರುವುದರಿಂದ, ಹೊಸ ವೈಶಿಷ್ಟ್ಯವು ರಿವರ್ಸ್ ಹುಡುಕಾಟವನ್ನು ನಿರ್ವಹಿಸಲು ಚಿತ್ರವನ್ನು ಡೌನ್‍ಲೋಡ್ ಮಾಡುವ ಅಗತ್ಯವಿಲ್ಲ ಎಂದರ್ಥ.
ರಿವರ್ಸ್ ಇಮೇಜ್ ಹುಡುಕಾಟವನ್ನು ಸಂಪೂರ್ಣವಾಗಿ ಗೂಗಲ್ ನಿರ್ವಹಿಸುತ್ತದೆ. ಆದ್ದರಿಂದ, ಚಿತ್ರದ ವಿಷಯಗಳಿಗೆ ವಾಟ್ಸ್‍ಪ್ ಪ್ರವೇಶವನ್ನು ಹೊಂದಿರುವುದಿಲ್ಲ.