ಒಟ್ಟಾವ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟದಲ್ಲಿ ಭಾರತ ಮೂಲದ ಅನಿತಾ ಆನಂದ್ (58) ಹಾಗೂ ಕಮಲಾ ಖೇರಾ (36) ಅವರು ಸ್ಥಾನ ಪಡೆದುಕೊಂಡಿದ್ದಾರೆ. ಕೆನಡಾ ಸಂಸತ್ತಿನ ಇತಿಹಾಸದಲ್ಲಿಯೇ ಖೇರಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ತು ಪ್ರವೇಶಿಸಿದವರಾಗಿದ್ದಾರೆ.
ಅನಿತಾ ಅವರಿಗೆ 'ಹೊಸ ಸಂಶೋಧನೆ, ವಿಜ್ಞಾನ ಮತ್ತು ಕೈಗಾರಿಕೆ' ಖಾತೆಯನ್ನು ನೀಡಲಾಗಿದೆ. ಕಮಲಾ ಅವರು 'ಆರೋಗ್ಯ' ಖಾತೆಯನ್ನು ನಿರ್ವಹಿಸಲಿದ್ದಾರೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸಂಪುಟದಲ್ಲಿಯೂ ಈ ಇಬ್ಬರು ಕಾರ್ಯನಿರ್ವಹಿಸಿದ್ದರು. ಟ್ರುಡೊ ಅವರ ರಾಜೀನಾಮೆ ಬಳಿಕ ಅನಿತಾ ಅವರೇ ಪ್ರಧಾನಿ ಆಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.
ಅನಿತಾ ಆನಂದ್