ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ "ವಾಚನಾ ವಸಂತ" ಕಾರ್ಯಕ್ರಮದ ಅಂಗವಾದ "ಮನೆಗೊಂದು ಪುಸ್ತಕ" ವಿತರಣಾ ಅಭಿಯಾನದ ಉದ್ಘಾಟನೆಯನ್ನು ನವಯುವಕ ಕಲಾವೃಂದ ಗ್ರಂಥಾಲಯ ಕುಳೂರು ಚಿನಾಲದ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಚಿಗುರುಪಾದೆ ಪೋಸ್ಟ್ ಮಾಸ್ಟರ್ ಚೆನ್ನಪ್ಪ ಪೂಜಾರಿಯವರ ಸ್ವಗೃಹದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಅವರ ಪತ್ನಿ ಕೆ.ಲೀಲಾವತಿ ಟೀಚರ್ ಅವರಿಗೆ ಪುಸ್ತಕ ನೀಡುವ ಮೂಲಕ ಅಭಿಯಾನದ ಉದ್ಘಾಟಿಸಿದರು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೈನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಸರಸ್ವತಿ, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ ಮಾಸ್ತರ್, ಕಿಶೋರ್ ಕುಮಾರ್ ಪಾವಳ, ಪ್ರಭಾಕರ ಶೆಟ್ಟಿ ಮಂಜಯ ಹಿತ್ಲು, ಸುರೇಶ್ ಬಂಗೇರ ಮಾಸ್ತರ್, ಎಂ. ಚಿತ್ರಾವತಿ ಟೀಚರ್, ಲವಾನಂದ ಎಲಿಯಾಣ ಮತ್ತು ಕವಿತಾ ನೀರೂಳಿಕೆ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ಸ್ವಾಗತಿಸಿ, ಲೈಬ್ರರಿ ಕಾರ್ಯದರ್ಶಿ ಸಂದೀಪ್ ವಂದಿಸಿದರು.