ಪಿಲಿಭಿತ್ : ಇಲ್ಲಿನ ಜಹಾನಾಬಾದ್ ಪ್ರದೇಶದ ಮಸೀದಿಯಲ್ಲಿ ಅನುಮತಿ ಪಡೆಯದೆ, ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಮೌಲ್ವಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
'ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ, ಧ್ವನಿವರ್ಧಕ ಬಳಸುವಂತಿಲ್ಲ. ಫೆ.28ರ ರಾತ್ರಿ ವೇಳೆ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ 'ನಮಾಜ್' ಹಾಗೂ 'ಆಜಾನ್' ಕೂಗಿದ್ದರು. ಈ ವೇಳೆ ವಿಚಾರಿಸಿದಾಗ ಮೌಲ್ವಿ ಅವರು ಯಾವುದೇ ಅನುಮತಿ ಪತ್ರ ನೀಡಿರಲಿಲ್ಲ. ಎಚ್ಚರಿಸಿದ ನಂತರವೂ ಧ್ವನಿವರ್ಧಕ ಬಳಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ' ಎಂದು ತಿಳಿಸಿದರು.
'ರಾಜ್ಯದಾದ್ಯಂತ ಈಗ 10 ಹಾಗೂ 12ನೇ ತರಗತಿ ಪರೀಕ್ಷೆ ನಡೆಯುತ್ತಿದ್ದು, ಧ್ವನಿವರ್ಧಕ ಬಳಸುವುದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ತೊಂದರೆಯಾಗುತ್ತದೆ' ಎಂದು ಮಿಶ್ರಾ ತಿಳಿಸಿದರು.