ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ನಾಲ್ಕನೇ ಉಪಕುಲಪತಿಯಾಗಿ ಪೆÇ್ರ. ಸಿದ್ದು ಪಿ. ಆಲಗೂರ ಸೋಮವಾರ ಅಧಿಕಾರ ವಹಿಸಿಕೊಂಡರು. ಆಡಳಿತ ಕಚೇರಿ ಡಾ. ಬಿ.ಆರ್. ಅಂಬೇಡ್ಕರ್ ಭವನ ತಲುಪಿದ ಅವರನ್ನು ಪೆÇ್ರ.ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ಡೀನ್‍ಗಳು, ಸಿಬ್ಬಂದಿ ಬರಮಾಡಿಕೊಂಡರು.
ಕರ್ನಾಟಕದ ಧಾರವಾಡ ನಿವಾಸಿಯಾಗಿರುವ ಪೆÇ್ರ. ಸಿದ್ದು ಪಿ. ಅಲಗೂರು ಅವರು ಕಂಪ್ಯೂಟರ್ ಸಯನ್ಸ್ ವಿಭಾಗದ ಪ್ರಾಧ್ಯಾಪಕರು. 2019 ರಿಂದ 2024 ರವರೆಗೆ, ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟ ಜಿಲ್ಲೆಯ ತೇರದಾಳದಲ್ಲಿ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್‍ನಲ್ಲಿ ಪದವಿ ಮತ್ತು ಅಲಹಾಬಾದ್‍ನ ಮೋತಿಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನೆ ಪುರ್ತಿಗೊಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಘಿದ್ದ ಸಂದರ್ಭ ಆಡಳಿತ ಸುಧಾರಣೆ, ಅಭಿವೃದ್ಧಿ ಚಟುವಟಿಕೆ ಮತ್ತು ಶೈಕ್ಷಣಿಕ ಪ್ರಗತಿಗೆ ಕರಣರಾಗಿದ್ದರು. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದು, ಅನೇಕ ಅಂತಾರಾಷ್ಟ್ರೀಯ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಇವರ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದೆ.
2009 ರಲ್ಲಿ ಸ್ಥಾಪನೆಯಾದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಝಾನ್ಸಿ ಜೇಮ್ಸ್ ಮೊದಲ ಉಪಕುಲಪತಿಯಾಗಿದ್ದು, ನಂತರ ಪೆÇ್ರ. ಜಿ. ಗೋಪಕುಮಾರ್, ಪೆÇ್ರ. ಎಚ್. ವೆಂಕಟೇಶ್ವರಲು ಅವರು ಉಪಕುಲಪತಿ ಹುದ್ದೆ ಅಲಂಕರಿಸಿದ್ದರು.