ವಾಷಿಂಗ್ಟನ್: ಇಂಗ್ಲಿಷ್ ಅನ್ನು ಅಮೆರಿಕದ ರಾಷ್ಟ್ರ ಭಾಷೆಯನ್ನಾಗಿ ಘೋಷಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ದೇಶ ಸ್ಥಾಪನೆಯಾಗಿ ಸುಮಾರು 250 ವರ್ಷಗಳಾದರೂ ಈವರೆಗೆ ರಾಷ್ಟ್ರಭಾಷೆ ಎಂದು ಅಧಿಕೃತವಾಗಿ ಇರಲಿಲ್ಲ.
ಈ ಆದೇಶವು ದೇಶದಲ್ಲಿ ಏಕತೆಯನ್ನು ಮೂಡಿಸಲು ಮತ್ತು ಸರ್ಕಾದ ದಕ್ಷತೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, 'ನಮ್ಮ ಗಣರಾಜ್ಯ ಸ್ಥಾಪನೆಯಾದಾಗಿನಿಂದ ಇಂಗ್ಲಿಷ್ ಅನ್ನು ರಾಷ್ಟ್ರ ಭಾಷೆಯಾಗಿ ಬಳಸಲಾಗುತ್ತಿದೆ. ಅಮೆರಿಕದ ಐತಿಹಾಸಿಕ ಆಡಳಿತ ದಾಖಲೆಗಳಾದ ಸ್ವಾತಂತ್ರ್ಯ ದೊರಕಿದ ಘೋಷಣೆ ಮತ್ತು ಸಂವಿಧಾನವೂ ಇಂಗ್ಲಿಷ್ ಭಾಷೆಯಲ್ಲಿದೆ' ಎಂದು ಶ್ವೇತ ಭವನ ಹೇಳಿದೆ.
ದೇಶದಲ್ಲಿ 340 ಮಿಲಿಯನ್ ನಿವಾಸಿಗಳಲ್ಲಿ ಸುಮಾರು 68 ಮಿಲಿಯನ್ ಜನರು ಇಂಗ್ಲಿಷ್ ಅನ್ನು ಹೊರತುಪಡಿಸಿ ಬೇರೆ ಭಾಷೆಯನ್ನು ಮಾತನಾಡುತ್ತಾರೆ, ಇದು 160 ಕ್ಕೂ ಹೆಚ್ಚು ಸ್ಥಳೀಯ ಅಮೆರಿಕನ್ ಭಾಷೆಗಳನ್ನು ಒಳಗೊಂಡಿದೆ ಎಂದು ಅಮೆರಿಕದ ಜನಗಣತಿಯ ವರದಿ ಮಾಹಿತಿ ನೀಡಿದೆ.