ಚಂಡೀಗಢ: ಭಾರತೀಯ ವಾಯಪಡೆಯ ಯುದ್ಧವಿಮಾನವೊಂದು ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ.
'ಪೈಲಟ್ ಸುರಕ್ಷಿತವಾಗಿದ್ದಾರೆ. ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ವಿಮಾನವನ್ನು ವಸತಿ ಪ್ರದೇಶದಿಂದ ದೂರಕ್ಕೆ ಹಾರಿಸಿದ್ದರಿಂದ ಜನರಿಗೆ ಯಾವುದೇ ತೊಂದರೆ ಮತ್ತು ಹಾನಿ ಸಂಭವಿಸಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.
'ದೈನಂದಿನ ತರಬೇತಿ ಹಾರಾಟದ ವೇಳೆ ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ' ಎಂದು ಭಾರತೀಯ ವಾಯುಪಡೆ ತಿಳಿಸಿದೆ.