ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಶ್ರೀದೇವರ ಉತ್ಸವ, ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಿತು. ಮಧ್ಯಾಹ್ನ ಶ್ರೀ ಪಿಲಿಚಾಮುಂಡಿ ದೈವದ ನರ್ತನ ಸೇವೆ, ಅರಸಿನ ಹುಡಿ, ಪ್ರಸಾದ ವಿತರಣೆ, ಅನ್ನಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಬುಧವಾರ ರಾತ್ರಿ ಶ್ರೀದೇವರ ಬಲಿ, ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಹಾಸ್ಯಮಯ ಕಾರ್ಯಕ್ರಮ, ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಮತ್ತು ಆಹ್ವಾನಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ, ಭಕ್ತಮಾರ್ಕಂಡೇಯ ಪ್ರದರ್ಶನಗೊಂಡಿತು. ಊರಪರವೂರ ಭಗವದ್ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.