ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ನೇರ ಪ್ರಸಾರ ಮಾಡಲು ಇಚ್ಚಿಸುವ ಅಧಿಕೃತ ಮಾಧ್ಯಮಗಳಿಗೆ ಕ್ಷೇತ್ರದ ಮಾಧ್ಯಮ ಸಮಿತಿಯ ವತಿಯಿಂದ ವಿಡಿಯೋ ಔಟ್ ಪುಟ್ ನೀಡಲಾಗುವುದು.
ಈ ಸೇವೆಗೆ ಒಂದು ದಿನದ ವಿಡಿಯೋ ಔಟ್‍ಪುಟ್‍ಗೆ ರೂಪಾಯಿ 5,000 ಹಾಗೂ 12 ದಿನಗಳ ನಿರಂತರ ಔಟ್‍ಪುಟ್ ಗೆ ರೂಪಾಯಿ 25,000 ನಿಗದಿಪಡಿಸಲಾಗಿರುತ್ತದೆ. ನೇರ ಪ್ರಸಾರ ನೀಡಲು ಇಚ್ಚಿಸುವ ಮಾಧ್ಯಮಗಳು ಮಾ. 25ರಂದು ಮಧ್ಯಾಹ್ನ 2ಗಂಟೆಗೆ ಮುಂಚಿತವಾಗಿ ದೂರವಾಣಿ ಸಂಖ್ಯೆ(9846201333)ಯನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದಾಘಿದೆ.
ದೇವಸ್ಥಾನದ ಮೀಡಿಯಾ ಸಮಿತಿಯ ತೀರ್ಮಾನವು ಅಂತಿಮವಾಗಿದ್ದು, ಮೀಡಿಯಾ ಸಮಿತಿ ಸೂಚಿಸುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ನೇರ ಪ್ರಸಾರ ನೀಡುವ ಮಾಧ್ಯಮಗಳು ತಾವು ನೀಡಲಿಚ್ಚಿಸುವ ದಿನಗಳ ಮೊತ್ತವನ್ನು ಕ್ಷೇತ್ರದ ಮಾಧ್ಯಮ ಸಮಿತಿಗೆ ತೆತ್ತು ರಶೀದಿ ಪಡೆದುಕೊಳ್ಳಬೇಕು. ನಗದು ಪಾವತಿಸಲು ಉಮೇಶ್ ಮಾಸ್ಟರ್(9446371115)ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.