ನವದೆಹಲಿ: ಪ್ರಧಾನಮಂತ್ರಿ ಯೋಜನೆಯಡಿ ಭೀಮಾ ಏತ ನೀರಾವರಿ ಯೋಜನೆ ಹಾಗೂ ರಾಮೇಶ್ವರ ನೀರಾವರಿ ಯೋಜನೆ ಸೇರ್ಪಡೆ ಮಾಡಲಾಗಿದೆ ಎಂದು ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ತಿಳಿಸಿದರು.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ನಾರಾಯಣ ಕೊರಗಪ್ಪ ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, 'ಭೀಮಾ ಏತ ನೀರಾವರಿ ಯೋಜನೆಯ ವೆಚ್ಚ ₹964 ಕೋಟಿ.ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮಕ್ಕೆ ₹52 ಕೋಟಿ ಆಗಲಿದೆ. ರಾಮೇಶ್ವರ ಯೋಜನೆ ವೆಚ್ಚ ₹331 ಕೋಟಿ. ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮಕ್ಕೆ ₹56 ಕೋಟಿ ವೆಚ್ಚವಾಗಲಿದೆ. ಭೀಮಾ ಯೋಜನೆಗೆ ಕೇಂದ್ರದಿಂದ ₹3.4 ಕೋಟಿ ಒದಗಿಸಲಾಗಿದೆ' ಎಂದರು.