ನಾರಾಯಣಪುರ: ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲರು ಸ್ಫೋಟಿಸಿದ ಕಚ್ಚಾ ಬಾಂಬ್‌ನಿಂದ ಭದ್ರತಾ ಪಡೆಗಳು ಸ್ವಲ್ಪದರಲ್ಲೇ ಪಾರಾಗಿವೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿವೆ.
ಸ್ಫೋಟದಿಂದಾಗಿ ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯ ಉಂಟಾಗಿಲ್ಲ.
ಆದರೆ ಸ್ಫೋಟದಿಂದಾಗಿ ಎದ್ದಿದ್ದ ಭಾರಿ ದೂಳು ಹಾಗೂ ಮಣ್ಣಿನಿಂದಾಗಿ ಓರ್ವ ಅಧಿಕಾರಿ ಸೇರಿ ಇಬ್ಬರು ಸಿಬ್ಬಂದಿಯ ಕಣ್ಣಿಗೆ ಸಮಸ್ಯೆ ಉಂಟಾಗಿದೆ. ಅವರನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಬುಜ್‌ಮಾದ್ ಪ್ರದೇಶದಲ್ಲಿ ಮುಂಜಾನೆ 3 ಗಂಟೆಗೆ ಘಟನೆ ನಡೆದಿದ್ದು, ಈ ವೇಖೆ ಛತ್ತೀಸಗಢ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿದ್ದವು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ನಕ್ಸಲರ ಪತ್ತೆಗೆ ಕೂಂಬಿಂಗ್ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.