ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯ ಹಿರಿಮೆಗಳನ್ನು ಅನಾವರಣಗೊಳಿಸುವ ಕಲಿಕೋತ್ಸವ ಹಾಗೂ ಪ್ರತಿಭೋತ್ಸವ ಇತ್ತೀಚೆಗೆ ಜರಗಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನ ನೌಫಾಲ್ ಉದ್ಘಾಟಿಸಿದರು. ಜಿ.ಪಂ.ಸದಸ್ಯ ಗೋಲ್ಡನ್ ರೆಹಮಾನ್ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಮಜಿದ್ ಪಚ್ಚಂಬಳ, ಅಬ್ದುಲ್ ರಹಮಾನ್ ಟಿ.ಎಂ., ಮಂಜೇಶ್ವರ ವಿದ್ಯಾಧಿಕಾರಿ ರಾಜಗೋಪಾಲ್, ಮಂಜೇಶ್ವರ ಬಿ.ಆರ್. ಸಿ ಯ ಬಿ. ಪಿ. ಸಿ ಸುಮಾದೇವಿ, ಶಾಲಾ ಎಸ್ ಎಂ ಸಿ ಸದಸ್ಯರಾದ ಫಾರೂಕ್ ಹಾಗೂ ಜಿಎಮ್.ಎಲ್. ಪಿ. ಎಸ್ ತೋಟಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್ ಎಂ ಶುಭ ಹಾರೈಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷ ಇರ್ಫಾನ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಅಲ್ ಮಹಿರ್ ಅರೆಬಿಕ್ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ನೂತನವಾಗಿ ನೇಮಕಗೊಂಡ ಶಿಕ್ಷಕಿಯರಾದ ಐಶ್ವರ್ಯ ಹಾಗೂ ಆಯಿಷತ್ ಸೈನಾಜ್ ಶಾಲೆಯ ಎಲ್ಲ ವಿದ್ಯಾರ್ಥಿ ಗಳಿಗೆ ಊಟದ ತಟ್ಟೆಯನ್ನು ಕೊಡುಗೆಯಾಗಿ ನೀಡಿ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಚಿತ್ರಾವತಿ ಚಿಗುರುಪಾದೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಮುಖ್ಯ ಶಿಕ್ಷಕ ರಿಯಾಸ್ ಪೆರಿಂಗಡಿ ವಂದಿಸಿದರು. ಶಿಕ್ಷಕ ಬಶೀರ್ ಕಾರ್ಯಕ್ರಮ ನಿರೂಪಿಸಿದರು ಬಳಿಕ ವಿವಿಧ ತರಗತಿ ಮಟ್ಟದಲ್ಲಿ ಜರಗಿದ ಉತ್ತಮ ಕಲಿಕಾ ಚಟುವಟಿಕೆಗಳ ಆಯ್ದ ಕಲಿಕಾ ಹಿರಿಮೆಗಳ ಪ್ರದರ್ಶನ ಹಾಗೂ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.