ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಮಸ್ಕಾರ ಮಂಟಪದ ಕಾಮಗಾರಿ ನಡೆಯಲಿರುವುದರಿಂದ ಮಾ.14 ರಿಂದ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗಿನ ಪೂಜೆ ಬೆಳಗ್ಗೆ 7.30ಕ್ಕೆ ಮತ್ತು ಮಧ್ಯಾಹ್ನದ ಪೂಜೆ 8.30ಕ್ಕೆ ನಡೆಯಲಿದೆ .9ಘಂಟೆಗೆ ನಡೆ ಮುಚ್ಚಲಿದೆ. ರಾತ್ರಿ ಪೂಜೆ ಯಥಾ ಸಮಯ ರಾತ್ರಿ 7.30ಕ್ಕೆ ನಡೆಯಲಿದೆ. ಕಾಮಗಾರಿ ಪೂರ್ಣವಾಗುವವರೆಗೆ ಈ ಬದಲಾವಣೆ ಇರಲಿದ್ದು ಕಾಮಗಾರಿ ಪೂರ್ಣಗೊಂಡ ನಂತರ ಯಥಾ ಸಮಯದಲ್ಲಿ ಪೂಜೆ ನಡೆಯಲಿದೆ. ದಿನ ನಿತ್ಯದ ಅನ್ನದಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ಸೇವೆಗಳು ಯಥಾ ಪ್ರಕಾರ ನಡೆಯಲಿದೆ.ಈ ಸಮಯದಲ್ಲಿ ನಮಸ್ಕಾರ ಮಂಟಪದ ಸಮೀಪ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.ಭಕ್ತ ಜನರು ಸಹಕರಿಸಬೇಕಾಗಿ ಕ್ಷೇತ್ರ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಅನಂತಪುರ: ಪೂಜಾ ಸಮಯದಲ್ಲಿ ಬದಲಾವಣೆ
0
ಮಾರ್ಚ್ 12, 2025
Tags