ವಾಷಿಂಗ್ಟನ್: ಉಕ್ರೇನ್ ಜೊತೆಗಿನ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾನುವಾರ ಸಂಜೆ ಫ್ಲೊರಿಡಾದಿಂದ ವಾಷಿಂಗ್ಟನ್‌ಗೆ ಪ್ರಯಾಣಿಸುವ ಮುನ್ನ ಮಾಧ್ಯಮದವರೊಂದಿಗೆ ಟ್ರಂಪ್ ಮಾತನಾಡಿದ್ದಾರೆ.
'ಮಂಗಳವಾರ ಏನಾದರೂ ಘೋಷಣೆ ಮಾಡಲು ಸಾಧ್ಯವೇ ಎನ್ನುವುನ್ನು ನಾವು ನೋಡುತ್ತೇವೆ. ಮಂಗಳವಾರ ನಾನು ಪುಟಿನ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಈ ವಾರಾಂತ್ಯದಲ್ಲಿ ಹಲವು ಕೆಲಸಗಳು ನಡೆದಿವೆ. ಈ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವೇ ಎನ್ನುವುದನ್ನು ನಾವು ನೋಡುತ್ತೇವೆ' ಎಂದು ಟ್ರಂಪ್ ಹೇಳಿದ್ದಾರೆ.
ಭೂಮಿ ಮತ್ತು ವಿದ್ಯುತ್ ಸ್ಥಾವರಗಳು ಯುದ್ಧವನ್ನು ಕೊನೆಗೊಳಿಸುವ ಸಂಭಾಷಣೆಯ ಭಾಗವಾಗಿರಲಿದೆ ಎಂದು ಟ್ರಂಪ್ ಹೇಳಿದ್ದಾರೆ.