ಕೋಝಿಕ್ಕೋಡ್: ವಿದ್ಯುತ್ ಬಿಲ್ ಪಾವತಿಸದ ಕಾರಣ ಕೆಎಸ್‍ಇಬಿ ಮೋಟಾರ್ ವಾಹನ ಇಲಾಖೆ ಕಚೇರಿಗೆ ಹೋಗಿ ಫ್ಯೂಸ್ ತೆಗೆದಿರಿಸಿದ ಘಟನೆ ನಡೆದಿದೆ. ವೈಕಂ ಕೆಎಸ್‍ಇಬಿ ಅಧಿಕಾರಿಗಳು ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೋಟಾರು ವಾಹನ ಇಲಾಖೆ ಕಚೇರಿಗೆ ತಲುಪಿ ಪ್ಯೂಸ್ ತೆಗೆದರು.
ವೈಕಂನ ಉಪ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಬಿಲ್ ಪಾವತಿಸಲು ನಿಗದಿತ ದಿನಾಂಕ ಮುಗಿದ ನಂತರವೂ, ಮೋಟಾರು ವಾಹನ ಇಲಾಖೆ ಹಣವನ್ನು ಪಾವತಿಸಿರಲಿಲ್ಲ. ನಂತರ, ಎಚ್ಚರಿಕೆಗಳ ಹೊರತಾಗಿಯೂ, ಬಿಲ್ ಪಾವತಿಸದಿದ್ದಾಗ, ಕಚೇರಿಗೆ ತೆರಳಿ ಪ್ಯೂಸ್ ತೆಗೆದಿರಿಸಬೇಕಾಯಿತು.ಬಳಿಕ ಕಚೇರಿಯ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ಅಧಿಕಾರಿಗಳು ಮತ್ತು ಕಚೇರಿಗೆ ಬಂದವರೆಲ್ಲರೂ ಕತ್ತಲೆಯಲ್ಲಿದ್ದರು. ಬಿಲ್ ಅನ್ನು ಕೇಂದ್ರೀಯವಾಗಿ ಪಾವತಿಸಲಾಗಿದೆ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.