ತಿರುವನಂತಪುರಂ: ಶಿಕ್ಷಕರ ವಿರುದ್ಧದ ಪೋಕ್ಸೊ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ.
ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರನ್ನು ಒಳಗೊಂಡ ಪ್ರಕರಣಗಳು ಸೇರಿದಂತೆ ಡಿಜಿಪಿ ಮುಂದೆ 72 ಪ್ರಕರಣಗಳು ಬಾಕಿ ಇವೆ. ಪೋಕ್ಸೊ ಪ್ರಕರಣಗಳಲ್ಲಿ ಆರೋಪಿಗಳಾದ ಶಿಕ್ಷಕರಿಗೆ ಯಾವುದೇ ರೀತಿಯ ರಕ್ಷಣೆ ನೀಡಲಾಗುವುದಿಲ್ಲ ಮತ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಶಿವನ್‍ಕುಟ್ಟಿ ಹೇಳಿರುವರು.
"ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ಕಾಗುಣಿತ ತಪ್ಪುಗಳು ಇರಬಾರದು. ಏನಾಯಿತು ಎಂಬುದನ್ನು ಪತ್ತೆಹಚ್ಚುವ ಕಾರ್ಯವನ್ನು ಶಿಕ್ಷಣ ನಿರ್ದೇಶಕರಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಮಾದಕ ದ್ರವ್ಯಗಳ ವಿತರಣೆಯನ್ನು ತಡೆಗಟ್ಟಲು ಪೋಷಕರ ಗುಂಪುಗಳನ್ನು ರಚಿಸಲಾಗುವುದು. ಪಾಠಗಳಲ್ಲಿ ಮಾದಕ ದ್ರವ್ಯ ಜಾಗೃತಿಯನ್ನು ಸಹ ಸೇರಿಸಲಾಗಿದೆ. ಮಾದಕ ದ್ರವ್ಯ ಜಾಗೃತಿಗಾಗಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು" ಎಂದು ಮಾಹಿತಿ ನೀಡಿರುವರು.
ಮಕ್ಕಳ ಚೀಲಗಳಲ್ಲಿ ವಸ್ತುಗಳನ್ನು ಮರೆಮಾಡಲಾಗುತ್ತಿದೆ. ಈ ನಿಟ್ಟಿನಲ್ಗಿ ಏನು ಮಾಡಬಹುದೆಂದು ಯೋಚಿಸಲಾಗುತ್ತಿದೆ. ಒಂದನೇ ತರಗತಿಗೆ ಪ್ರವೇಶಿಸುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುವುದು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಮಾನ. ಇದು ಸ್ವೀಕಾರಾರ್ಹವಲ್ಲ. 2026-27ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪ್ರವೇಶ ವಯಸ್ಸನ್ನು ಆರು ವರ್ಷಗಳಿಗೆ ಹೆಚ್ಚಿಸಲಾಗುವುದು. ಪ್ರಸ್ತುತ, ಶೇಕಡಾ 52 ರಷ್ಟು ಮಕ್ಕಳು ಆರು ವರ್ಷದವರಿದ್ದಾಗ ಶಾಲಾ ಪ್ರವೇಶ ಪಡೆಯುತ್ತಾರೆ ಎಂದು ಸಚಿವರು ಹೇಳಿದರು.
ಡಿಸೆಂಬರ್‍ನಲ್ಲಿ ಪಠ್ಯಪುಸ್ತಕ ಮುದ್ರಿಸಲು ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿಯವರೆಗೆ 2.10 ಲಕ್ಷ ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನವನ್ನು 72 ಶಿಬಿರಗಳಲ್ಲಿ ನಡೆಸಲಾಗುತ್ತಿದ್ದು, ಹೈಯರ್ ಸೆಕೆಂಡರಿ ಮೌಲ್ಯಮಾಪನ ಶಿಬಿರದಲ್ಲಿ ಸುಮಾರು 25,000 ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ವಿ ಶಿವನ್‍ಕುಟ್ಟಿ ಹೇಳಿದರು.