HEALTH TIPS

ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಭಾರತಕ್ಕೆ ಗೊತ್ತು: ದಿನೇಶ್‌ ಕೆ. ತ್ರಿಪಾಠಿ

ನವದೆಹಲಿ: ಚೀನಾ ದೇಶವು ಕೆಲವು ದಶಕಗಳಿಂದ ಅರಬ್ಬೀ ಸಮುದ್ರದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚು ಮಾಡಿದೆ. ಪೀಪಲ್ಸ್‌ ಲಿಬರೇಷನ್‌ ಆರ್ಮಿಯ 6-8 ನೌಕೆಗಳು ಯಾವುದೇ ಸಮಯದಲ್ಲಿಯೂ ಅಲ್ಲಿ ಇರುತ್ತವೆ. ಆದರೆ ಯಾರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬ ಮಾಹಿತಿ ಭಾರತಕ್ಕೆ ತಿಳಿದಿರುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ.ತ್ರಿಪಾಠಿ ಅವರು ಶುಕ್ರವಾರ ತಿಳಿಸಿದರು.

'ಭಾರತ 2024: ಯುದ್ಧದಲ್ಲಿ ಆತ್ಮ ನಿರ್ಭರತೆ' ವಿಷಯದ ಬಗ್ಗೆ ಮಾತನಾಡಿದ ಅವರು, ಚೀನಾ ಎಲ್ಲಿಗೆ ಪ್ರವೇಶಿಸಬಾರದು ಎಂದು ಬಯಸುತ್ತೇವೆಯೋ ಅಲ್ಲಿಗೆ ಕಾಲಿಡಲು ಭಾರತ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಳ್ಳೆಯ ವಿಚಾರ ಎಂದರೆ; ಯಾರು, ಎಲ್ಲಿ, ಏನು ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಭಾರತದ ನೌಕಾಪಡೆಗೆ ಇರುತ್ತದೆ. ಬಾಹ್ಯಾಕಾಶ ಆಧಾರಿತ ಕಣ್ಗಾವಲು ಜತೆಗೆ ಮಾನವಸಹಿತ, ಮಾನವರಹಿತ ತಂತ್ರಜ್ಞಾನದ ಮೂಲಕ ಹದ್ದಿನ ಕಣ್ಣಿಡಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕವೂ ಮಾಹಿತಿ ಲಭಿಸುತ್ತದೆ ಎಂದು ಅವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries