ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 13 ರಂದು ಮುಂಜಾನೆ ಪೊಲೀಸ್ ಗಸ್ತಿನಲ್ಲಿದ್ದಾಗ ಅಫಾಜುದ್ದೀನ್ ಗಾಜಿ (40) ಎಂಬ ಬಾಂಗ್ಲಾದೇಶದ ಪ್ರಜೆ ಪತ್ತೆಯಾಗಿದ್ದಾರೆ. 2022 ರಲ್ಲಿ ಬೆನಾಪೋಲ್-ಪೆಟ್ರಾಪೋಲ್ ಗಡಿಯ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಗಾಜಿ, ದೆಹಲಿಗೆ ರೈಲಿನಲ್ಲಿ ಬಂದು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು.
ಆತ ಗುರುತು ಪತ್ತೆಯಾಗದಂತೆ ನಗರದಾದ್ಯಂತ ಆಗಾಗ್ಗೆ ಚಲಿಸುತ್ತಿದ್ದ ಎಂದು ಪೊಲೀಸ್ ಉಪ ಕಮಿಷನರ್ (ನೈಋತ್ಯ) ಸುರೇಂದ್ರ ಚೌಧರಿ ಎಂದು ತಿಳಿಸಿದರು.
ಪೊಲೀಸರು ವಿಚಾರಣೆಗೊಳಪಡಿಸಿದಾಗ ಆತ ಆರಂಭದಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಎಂದು ತೋರಿಸಿದ್ದಾರೆ. ಆದರೆ ಹೆಚ್ಚಿನ ವಿಚಾರಣೆಯಲ್ಲಿ ಅವರ ನಿಜವಾದ ಗುರುತು ಬಹಿರಂಗವಾಗಿದೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯು ಗಡೀಪಾರು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ ಮತ್ತು ಬಾಂಗ್ಲಾದೇಶಕ್ಕೆ ಹಿಂದಿರುಗುವವರೆಗೆ ಗಾಜಿಯನ್ನು ಶಹಜಾದಾ ಬಾಗ್‌ನ ಸೇವಾ ಸದನ್‌ನಲ್ಲಿ ಇರಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.