ಉಪ್ಪಳ: ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತರಾಗುತ್ತಿರುವ ರಾಜಗೋಪಾಲ್ ಅವರಿಗೆ ಮುಳಿಂಜ ಶಾಲೆಯಲ್ಲಿ ಸೋಮವಾರ ಗೌರವಿಸಿ ಬೀಳ್ಕೊಡಲಾಯಿತು. .
ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರೆಹಮನ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನ ನೌಫಲ್, ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಗ್ರಾಮ ಸದಸ್ಯರಾದ ಅಬ್ದುಲ್ ರಹಮಾನ್, ಮಜೀದ್ ಪಚ್ಚಬಳ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್, ಯಸ್. ಯಂ. ಸಿ ಸದಸ್ಯ ಫಾರೂಕ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.