ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ವೇಳೆ ತಮ್ಮ ಸಾಮಾನ್ಯ ಉಡುಪು ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ವರದಿಗಾರರೊಬ್ಬರಿಗೆ ಝೆಲೆನ್‌ಸ್ಕಿ ಕಟುವಾಗಿ ಉತ್ತರಿಸಿದ್ದಾರೆ.
ಸಭೆಯ ಸಮಯದಲ್ಲಿ ನೀಲಿ ಸೂಟ್ ಧರಿಸಿದ್ದ ಶ್ವೇತ ಭವನದ ವರದಿಗಾರ ಬ್ರಿಯಾನ್ ಗ್ಲೆನ್ ಅವರು ಝೆಲೆನ್‌ಸ್ಕಿ ಬಳಿ, 'ನೀವೇಕೆ ಸೂಟ್ ಧರಿಸಲಿಲ್ಲ? ನಿಮ್ಮ ಬಳಿ ಸೂಟ್ ಇದೆಯಾ? ಅಮೆರಿಕದ ಕಚೇರಿಯ ಘನತೆಯನ್ನು ಗೌರವಿಸದಿರುವ ಬಗ್ಗೆ ಬಹಳಷ್ಟು ಅಮೆರಿಕನ್ನರಿಗೆ ಅಸಮಾಧಾನವಿದೆ' ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಝೆಲೆನ್‌ಸ್ಕಿ, 'ನಿಮಗೇನು ಸಮಸ್ಯೆ? ಈ ಯುದ್ಧ ಮುಗಿದ ಮೇಲೆ ಸೂಟ್ ಧರಿಸುತ್ತೇನೆ. ಅದು ಬಹುಶಃ ನೀವು ಧರಿಸಿದಂತೆಯೇ ಇರಬಹುದು, ಅಥವಾ ಉತ್ತಮವಾಗಿರುವ ಸೂಟ್ ಆಗಿರಬಹುದು, ಬಹುಶಃ ಇದಕ್ಕಿಂತ ಅಗ್ಗವಾಗಿರಬಹುದು. ಗೊತ್ತಿಲ್ಲ, ನಾವು ನೋಡುತ್ತೇವೆ' ಎಂದಿದ್ದಾರೆ.