HEALTH TIPS

ತೂಕ ಇಳಿಕೆಗೆ ಈ ಡಿಟಾಕ್ಸ್ ಡ್ರಿಂಕ್ಸ್ ಪರಿಣಾಮಕಾರಿ: ರೋಗ ನಿರೋಧಕ ಶಕ್ತಿ ವೃದ್ಧಿಸುವುದು

 ಡಿಟಾಕ್ಸ್ ಪಾನೀಯಾ ತುಂಬಾನೇ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಮಾತ್ರವಲ್ಲ ಮೈ ತೂಕವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ನಾವಿಲ್ಲಿ 7 ಡಿಟಾಕ್ಸ್ ಪಾನೀಯ ರೆಸಿಪಿ ನೀಡಿದ್ದೇವೆ, ತಿಂಗಳಿನಲ್ಲಿ ವಾರಕ್ಕೊಮ್ಮೆ ಅಥವಾ ಒಂದು ವಾರ ಬಿಟ್ಟು ಈ ಡಿಟಾಕ್ಸ್ ನೀರನ್ನು ದಿನಕ್ಕೆ ಒಂದರಂತೆ ಸೇವಿಸುತ್ತಿದ್ದರೆ ನೀವು ತುಂಬಾನೇ ಪ್ರಯೋಜನ ಪಡೆಯಬಹುದು. ಬನ್ನಿ ಈ ಡಿಟಾಕ್ಸ್ ಪಾನೀಯಗಳ ರೆಸಿಪಿ ನೋಡೋಣ:


ಬೇಕಾಗುವ ಸಾಮಗ್ರಿ

1. ನಿಂಬೆಯಿಂದ ಮಾಡಿದ ಡಿಟಾಕ್ಸ್ ನೀರು
ಬೇಕಾಗುವ ಸಾಮಗ್ರಿ
ನಿಂಬೆಹಣ್ಣಿನ ಅರ್ಧ ಪೀಸ್
10-12 ಪುದೀನಾ ಎಲೆ
1 ಲೀಟರ್ ನೀರು
ಸ್ವಲ್ಪ ಐಸ್‌ ಕ್ಯೂಬ್ಸ್

ರೆಸಿಪಿ ವಿಧಾನ:
ಒಂದು ಜಗ್‌ಗೆ ನೀರು ಹಾಕಿ, ಅದರಲ್ಲಿ ನಿಂಬೆ ತುಂಡು ಹಾಕಿ ಅದರಲ್ಲಿ ಪುದೀನಾ ಎಲೆ ಹಾಕಿ 2-3 ಗಂಟೆ ಇಟ್ಟು ಆ ನೀರನ್ನು ಕುಡಿಯಿರಿ, ಇದಕ್ಕೆ ಬೇಕಿದ್ದರೆ ಐಸ್‌ ಕ್ಯೂಬ್ಸ್ ಸೇರಿಸಿ ಕುಡಿಯಬಹುದು

2. ಸೌತೆ ಮತ್ತು ನಿಂಬೆಯ ಡಿಟಾಕ್ಸ್ ನೀರು
1/2 ಸೌತೆ
1 ನಿಂಬೆಹಣ್ಣು(ಅರ್ಧ ಹಾಕಿದರೆ ಸಾಕು)
1 ಲೀಟರ್ ನೀರು
ನೀವು ಒಂದು ಲೀಟರ್ ನೀರಿಗೆ ಸೌತೆಕಾಯಿ ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ನಿಂಬೆಹಣ್ಣು ಕತ್ತರಿಸಿ ಹಾಕಿ ಆ ನೀರನ್ನು ನಿಮಗೆ ಬಾಯಾರಿಕೆಯಾದಾಗ ಕುಡಿಯಿರಿ.

3. ಸೇಬು, ಚಕ್ಕೆ ಡಿಟಾಕ್ಸ್ ನೀರು
1 ಸೇಬು
1 ಚಕ್ಕೆ
1 ಲೀಟರ್ ನೀರು

ನೀವು ಒಂದು ಲೀಟರ್‌ ನೀರಿಗೆ ಸೇಬು ಕತ್ತರಿಸಿ ಹಾಕಿ, ಅದಕ್ಕೆ ಒಂದು ಚಕ್ಕೆ ತಂಡು ಹಾಕಿ 2 ಗಂಟೆ ಬಿಡಿ ನಂತರ ಈ ನೀರನ್ನು ಕುಡಿಯಿರಿ.

4. ಶುಂಠಿ ಮತ್ತು ನಿಂಬೆಹಣ್ಣಿನ ತುಂಡು
ಬೇಕಾಗುವ ಸಾಮಗ್ರಿ
1 ಚಿಕ್ಕ ತುಂಡು ಶುಂಠಿ
1 ನಿಂಬೆ ತುಂಡು
1 ಲೀಟರ್ ನೀರು

ಬೇಕಾಗುವ ಸಾಮಗ್ರಿ
ಒಂದು ಲೀಟರ್ ನೀರಿಗೆ ಸ್ವಲ್ಪ ಶುಂಠಿ, ನಿಂಬೆಹಣ್ಣು ಹಾಕಿ ಆ ನೀರನ್ನು ಎರಡು ಗಂಟೆ ಇಟ್ಟು ನಂತರ ಆ ನೀರನ್ನು ಕುಡಿಯಿರಿ.

5. ಕಲ್ಲಂಗಡಿ ಮತ್ತು ಪುದೀನಾ ಡಿಟಾಕ್ಸ್ ನೀರು
ಬೇಕಾಗುವ ಸಾಮಗ್ರಿ
1 ಲೋಟ ಕಲ್ಲಂಗಡಿ ಜ್ಯೂಸ್
10 ಪುದೀನಾ ಎಲೆ
ಈ ಜ್ಯೂಸ್‌ ಕುಡಿಯಿರಿ, ಇದು ಕೂಡ ಅತ್ಯುತ್ತಮವಾದ ಡಿಟಾಕ್ಸ್ ಡ್ರಿಂಕ್‌ ಆಗಿದೆ, ಆದರೆ ಜ್ಯೂಸ್‌ ಮಾಡುವಾಗ ಸಕ್ಕರೆ ಸೇರಿಸಬೇಡಿ.

6. ಪೈನಾಪಲ್‌ ಮತ್ತು ಶುಂಠಿಯ ಡಿಟಾಕ್ಸ್ ನೀರು
1/2 ಕಪ್‌ ಪೈನಾಪಲ್ ತುಂಡುಗಳು
1 ಇಂಚಿನಷ್ಟು ಶುಂಠಿ
1 ಲೀಟರ್ ನೀರು
ಮಾಡುವ ವಿಧಾನ
1 ಲೀಟರ್ ನೀರಿಗೆ ಪೈನಾಪಲ್ ಹಾಕಿ, ಶುಂಠಿ ಸೇರಿಸಿ ಸ್ವಲ್ಪ ಹೊತ್ತು ಇಟ್ಟು ಆ ನೀರನ್ನು ಕುಡಿಯಿರಿ.

7. ಲೋಳೆಸ ಮತ್ತು ನಿಂಬೆಹಣ್ಣು
1 ಚಮಚ ಲೋಳೆಸರ
1 ನಿಂಬೆಹಣ್ಣು
1 ಲೀಟರ್‌ ನೀರು
ಮಾಡುವ ವಿಧಾನ
ನೀವು ಒಂದು ಲೀಟರ್ ನೀರಿಗೆ ಲೋಳೆಸರ ಸೇರಿಸಿ, ಅದರಲ್ಲಿ ನಿಂಬೆ ತುಂಡು ತುರಿಸಿ 2 ಗಂಟೆಯ ಬಳಿಕ ಕುಡಿಯಿರಿ.

ಈ ಪಾನೀಯಗಳು ಬಾಡಿ ಡಿಟಾಕ್ಸ್ ಮಾಡಲು ತುಂಬಾನೇ ಸಹಕಾರಿ. ದೇಹದಲ್ಲಿ ಕಶ್ಮಲವನ್ನು ಹೊರ ಹಾಕುತ್ತದೆ ಹಾಗೂ ಈ ಪಾನೀಯಗಳು ತೂಕ ನಿಯಂಣತ್ರಣಕ್ಕೆ ಸಹಕಾರಿ.







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries