ಬ್ಲಡ್ ಶುಗರ್ ಜಾಸ್ತಿಯಾದಾಗ ದೇಹ ನೀಡುತ್ತದೆ ಈ ಸಂಕೇತ :
ಪಾದಗಳಲ್ಲಿ ಕಂಡುಬರುವ ಲಕ್ಷಣ :
ಮಧುಮೇಹ ಪಾದಗಳ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ.ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾದಾಗ ನರಮಂಡಲಕ್ಕೆ ಹಾನಿಯಾಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ರೋಗಿಯ ನರಮಂಡಲಕ್ಕೆ ಹಾನಿಯಾದಾಗ ಯಾವುದೇ ಸಂವೇದನೆ ತಿಳಿಯುವುದಿಲ್ಲ. ರಕ್ತ ಪರಿಚಲನೆಯಲ್ಲಿ ತೊಂದರೆಯಾದರೆ, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹೀಗಾದಾಗ ಸೋಂಕನ್ನು ಗುಣಪಡಿಸುವುದು ತುಂಬಾ ಕಷ್ಟಕರವಾಗುತ್ತದೆ.
ಕಣ್ಣುಗಳಲ್ಲಿ ಬದಲಾವಣೆ :
ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಕಣ್ಣುಗಳ ರೆಟಿನಾದಲ್ಲಿನ ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾದಾಗ ಕಣ್ಣುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದೃಷ್ಟಿ ದುರ್ಬಲಗೊಳ್ಳುವುದು, ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ರೋಗ, ಗ್ಲುಕೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಒಸಡುಗಳಲ್ಲಿ ನೋವು :
ಬ್ಲಡ್ ಶುಗರ್ ಹೆಚ್ಚಾದಾಗ ಒಸಡು ರೋಗವೂ ಕಾಣಿಸುತ್ತದೆ. ಇದರಲ್ಲಿ, ರಕ್ತನಾಳಗಳು ಮುಚ್ಚಲ್ಪಡುತ್ತವೆ ಅಥವಾ ದಪ್ಪವಾಗುತ್ತವೆ. ಇದರಿಂದಾಗಿ ಒಸಡುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಅಧಿಕ ರಕ್ತದ ಸಕ್ಕರೆಯಿಂದಾಗಿ, ಬಾಯಿಯಲ್ಲಿ ಬ್ಯಾಕ್ಟೀರಿಯಾವೂ ಬೆಳೆಯುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮರಸ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)