ಕಾಸರಗೋಡು : ಅಖಿಲ ಭಾರತ ಆಂದೋಲನದ ಅಂಗವಾಗಿ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸಂಜೆ ಧರಣಿ ಕಾಸರಗೋಡು ನಗರದಲ್ಲಿ ಜರುಗಿತು. ಬಿಎಂಎಸ್ ದಕ್ಷಿಣ ಕ್ಷೇತ್ರೀಯ ಸಹ ಸಂಘಸ್ಥಾನದ ಕಾರ್ಯದರ್ಶಿ ಎಂ.ಪಿ. ರಾಜೀವನ್ ಧರಣಿ ಉದ್ಘಾಟಿಸಿದರು.
ಇಪಿಎಫ್ ಪಿಂಚಣಿ ಕನಿಷ್ಠ 5000 ರೂ. ನಿಗದಿಪಡಿಸಬೇಕು, ಕೊನೆಯ ಹಂತದಲ್ಲಿ ಪಡೆದ ವೇತನದ ಶೇ.50 ಮೊತ್ತವನ್ನು ಪಿಂಚಣಿಯಾಗಿ ನೀಡಬೇಕು, ಇಪಿಎಫ್ ಮಿತಿಯನ್ನು 15000 ರೂ.ನಿಂದ 30000 ರೂ.ಗೆ ಹೆಚ್ಚಿಸಬೇಕು, ಇಎಸ್‍ಐ ಮಿತಿಯನ್ನು 21000 ರೂ.ನಿಂದ 42000 ರೂ.ಗೆ ಹೆಚ್ಚಳಗೊಳಿಸಬೇಕು, ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ನಿಲುವಿನಿಂದ ಹಿಂದೆ ಸರಿಯಬೇಕು, ವಿಮಾ ಕಂಪನಿಗಳಲ್ಲಿ ಶೇ.100 ವಿದೇಶಿ ಸಹಭಾಗಿತ್ವ ನೀಡುವುದನ್ನು ಕೈಬಿಡಬೇಕು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ನೌಕರರಿಗೆ ಸರ್ಕಾರಿ ವೇತನ ನೀಡುವುದರೊಂದಿಗೆ ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಮುಂತದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.
ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಅನಿಲ್ ಬಿ.ನಾಯರ್, ದಿನೇಶ್ ಬಂಬ್ರಾಣ, ಹರೀಶ್ ಕುದುರೆಪಾಡಿ, ಗುರುದಾಸ್, ಭರತನ್.ಕಲ್ಯಾಣ್ ರಸ್ತೆ, ಪ್ರದೀಪ್ ಕೆಲೋತ್, ಟಿ.ಕೃಷ್ಣನ್, ವಿ.ಬಿ.ಸತ್ಯನಾಥ್, ಲೀಲಾಕೃಷ್ಣನ್, ಮತ್ತು ರಾಘವನ್ ಮುಳ್ಳೇರಿಯಾ ಉಪಸ್ಥಿತರಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಬಾಬು ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಯಶವಂತಿ ಮೀಂಜ ವಂದಿಸಿದರು.