ಮುಳ್ಳೇರಿಯ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಆರೋಗ್ಯ ಇಲಾಖೆ ಪ್ರಾರಂಭಿಸಿದ ಕ್ಯಾನ್ಸರ್ ತಡೆಗಟ್ಟುವಿಕೆ ಸಾಮೂಹಿಕ ಅಭಿಯಾನದ ಭಾಗವಾಗಿ, ಪ್ಲಾಂಟೇಶನ್ ಕಾಪೆರ್Çರೇಷನ್ ಕಾರ್ಮಿಕರು ಮತ್ತು ಉದ್ಯೋಗಿಗಳಿಗಾಗಿ ಜಾಗೃತಿ ವಿಚಾರ ಸಂಕಿರಣ ಮತ್ತು ಮೆಗಾ ಸ್ಕ್ರೀನಿಂಗ್ ಶಿಬಿರ ಗುರುವಾರ ಮುಳಿಯಾರಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಕಾಸರಗೋಡು ಪ್ಲಾಂಟೇಶನ್ ಕಾಪೆರ್Çರೇಷನ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ. ಮ್ಯಾಥ್ಯೂ ಉದ್ಘಾಟಿಸಿದರು. ಪ್ಲಾಂಟೇಶನ್ ಕಾಪೆರ್Çರೇಷನ್ ಅಧ್ಯಕ್ಷ ಒ.ಪಿ.ಎ. ಸಲಾಂ ಅಧ್ಯಕ್ಷತೆ ವಹಿಸಿದ್ದರು. ಉಪ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಸಂತೋಷ್ ಕಪ್ಪಾಚೇರಿ, ನೋಡಲ್ ಅಧಿಕಾರಿ ಡಾ. ರಂಜಿತ್ ಪಿ, ಮತ್ತು ಉಪಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಪಿ.ಕೆ. ಕೃಷ್ಣದಾಸ್ ಮಾತನಾಡಿದರು. ಕಾಸರಗೋಡು ಎಸ್ಟೇಟ್ ವ್ಯವಸ್ಥಾಪಕ ಯು.ಸಜೀವ್ ಸ್ವಾಗತಿಸಿ, ಮುಳಿಯಾರ್ ವೈದ್ಯಾಧಿಕಾರಿ ಡಾ. ಶಮೀನಾ ತನ್ವೀರ್ ವಂದಿಸಿದರು.
ಶಿಬಿರದಲ್ಲಿ 165 ಜನರು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ, ಜೀವನಶೈಲಿ ರೋಗ ರೋಗನಿರ್ಣಯ, ಕ್ಷಯರೋಗ ತಪಾಸಣೆ, ಕುಷ್ಠರೋಗ ತಪಾಸಣೆ ಮತ್ತು ಕ್ಯಾನ್ಸರ್ ತಪಾಸಣೆಯನ್ನು ಆಯೋಜಿಸಲಾಗಿತ್ತು.