ನವದೆಹಲಿ: ಶುಕ್ರವಾರ ಇಲ್ಲಿ ನಡೆದ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು 'ಅನುಚಿತ ನಡವಳಿಕೆ' ಪ್ರದರ್ಶಿಸಿದ್ದರಿಂದ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಸಭೆಯಿಂದ ಹೊರನಡೆದರು.
ಮೂಲಗಳ ಪ್ರಕಾರ, ಮತದಾರರ ಗುರುತಿನ ಚೀಟಿಗಳು ಒಂದೇ ರೀತಿಯ ಸಂಖ್ಯೆಗಳನ್ನು ಹೊಂದಿರುವ ವಿಷಯದ ಕುರಿತು ಕೂಡಲೇ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು.
ಈ ವಿಚಾರದಲ್ಲಿ ಸಂಸದರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದ ಕಾರಣ, ಧನಕರ್ ಅವರು ಅರ್ಧದಿಂದಲೇ ಸಭೆಯಿಂದ ಹೊರನಡೆದರು' ಎಂದು ಮೂಲಗಳು ತಿಳಿಸಿವೆ.