HEALTH TIPS

ಪಡಿತರ ಚೀಟಿ ಮಸ್ಟರಿಂಗ್ ಅವಧಿ ವಿಸ್ತರಿಸಲು ಕೇರಳ ಆಗ್ರಹ

ನವದೆಹಲಿ: ಪಡಿತರ ಚೀಟಿ ಮಸ್ಟರಿಂಗ್ ನಡೆಸುವ ಕಾಲಾವಧಿಯನ್ನು ಕನಿಷ್ಠ  ಮೇ 31 ರವರೆಗೆ ಗಡುವನ್ನು ವಿಸ್ತರಿಸುವಂತೆ ಕೇರಳ ಕೇಂದ್ರವನ್ನು ಕೋರಿದೆ.

ಕೇಂದ್ರ ಆಹಾರ ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗಿನ ಸಭೆಯಲ್ಲಿ, ಆಹಾರ ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಜಿ.ಆರ್.ಅನಿಲ್ ಈ ಬೇಡಿಕೆ ಇಟ್ಟಿದ್ದು ಮುಂದೇನೆಂದು ಕಾದು ನೋಡಬೇಕಿದೆ.

ಎಫ್‍ಸಿಐನಿಂದ ನೇರವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ವಿತರಿಸಲು ಸಪ್ಲೈಕೋಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಜಿ.ಆರ್. ಅನಿಲ್ ಅಭಿನಂದಿಸಿದರು. ಸಪ್ಲೈಕೋದ 50 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಕೇಂದ್ರ ಸಚಿವರನ್ನು ಆಹ್ವಾನಿಸಲು ರಾಜ್ಯ ಸಚಿವರು ಭೇಟಿಯಾಗಿದ್ದರು. 

ಮಾರ್ಚ್ 31 ರಂದು ಮಸ್ಟರಿಂಗ್ ಅವಧಿ ಮುಗಿಯುವ ವೇಳೆಗೆ ರಾಜ್ಯದಲ್ಲಿ ಶೇ.94 ರಷ್ಟು ಕಾರ್ಡ್‍ದಾರರು ಮಸ್ಟರಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಸಚಿವ ಅನಿಲ್ ತಿಳಿಸಿದರು.

ದೂರದ ಪ್ರದೇಶಗಳಲ್ಲಿರುವವರು ಮತ್ತು ದೈಹಿಕ ಅಂಗವೈಕಲ್ಯ ಹೊಂದಿರುವವರು ಮಸ್ಟರಿಂಗ್‍ನಲ್ಲಿ ಹಿಂದುಳಿದಿದ್ದಾರೆ. ಸಾಧ್ಯವಾದಷ್ಟು ಪಡಿತರ ಚೀಟಿದಾರರನ್ನು ಒಟ್ಟುಗೂಡಿಸುವ ಮೂಲಕ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಗುರಿಯಾಗಿದೆ. ಮಸ್ಟರಿಂಗ್ ದಿನಾಂಕವನ್ನು ವಿಸ್ತರಿಸಿದರೆ, ಆ ಕಾರ್ಯಾಚರಣೆಯನ್ನು ಪೂರ್ಣಗೊಳಿಸಬಹುದು ಎಂದು ಸಚಿವರು ಹೇಳಿದರು. ಕಾರ್ಯದರ್ಶಿ ಮಟ್ಟದಲ್ಲಿ ಚರ್ಚೆಗಳು ನಡೆಯಲಿದ್ದು, ಅಗತ್ಯವಿದ್ದರೆ ದಿನಾಂಕ ವಿಸ್ತರಣೆಯನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಗ್ರಾಹಕ ರಾಜ್ಯಗಳಲ್ಲಿ ಒಂದಾದ ಕೇರಳ, ತನಗೆ ಅಗತ್ಯವಿರುವ ಆಹಾರದ ಕೇವಲ ಶೇ. 15 ರಷ್ಟು ಮಾತ್ರ ಉತ್ಪಾದಿಸುತ್ತದೆ.

ಆಹಾರ ಸಬ್ಸಿಡಿಗಳನ್ನು ನಗದು ರೂಪದಲ್ಲಿ ಬದಲಾಯಿಸುವ ಆಲೋಚನೆಯು ರಾಜ್ಯದಲ್ಲಿ ಆಹಾರ ಧಾನ್ಯಗಳ ಸಂಗ್ರಹದಲ್ಲಿ ಭಾರಿ ಇಳಿಕೆಗೆ ಕಾರಣವಾಗುತ್ತದೆ ಎಂಬ ಅಂಶವನ್ನು ಸಚಿವರು ಕೇಂದ್ರ ಸಚಿವರ ಗಮನಕ್ಕೆ ತಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries