ಶ್ರೀನಗರ: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನವು ಸಾರ್ವಜನಿಕರ ವೀಕ್ಷಣೆಗೆ ಬುಧವಾರದಿಂದ ಮುಕ್ತವಾಗಿದೆ.
ದಾಲ್ ಸರೋವರ ಮತ್ತು ಜಬಾರ್‌ವಾನ್ ಬೆಟ್ಟಗಳ ನಡುವೆ ಇರುವ ಇಂದಿರಾ ಗಾಂಧಿ ಸ್ಮಾರಕ ಟ್ಯುಲಿಪ್ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಚಾಲನೆ ನೀಡಿದರು.
55 ಎಕರೆ ವಿಸ್ತೀರ್ಣ ಹೊಂದಿರುವ ಉದ್ಯಾನದಲ್ಲಿ ಸುಮಾರು 74 ತಳಿಯ 17 ಲಕ್ಷ ಟ್ಯುಲಿಪ್ ಹೂವುಗಳು ಅರಳಿವೆ.
ಟ್ಯುಲಿಪ್ ಉದ್ಯಾನದಲ್ಲಿ ಜನರು ಫೋಟೊ ತೆಗೆಸಿಕೊಂಡರು - ಪಿಟಿಐ ಚಿತ್ರ