ಸಮರಸ ಚಿತ್ರಸುದ್ದಿ: ಪೆರ್ಲ: ಶೇಣಿ ಶ್ರೀ ಚಂಬ್ರಕಾನ ಧೂಮಾವತಿ ದೈವಸ್ಥಾನ ವಾರ್ಷಿಕ ನೇಮೋತ್ಸವ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರ ಅಂಗವಾಗಿ ಗುಳಿಗ ಹಾಗೂ ಪರಿವಾರ ದೈವಗಳ ಕೋಲ ಹಾಗೂ ಪಡೈ ಧೂಮಾವತೀ ಹಾಗೂ ಚಂಬ್ರಕಾನತ್ತಾಯ ಧೂಮವತೀ ದೈವದ ನೇಮ ಹಾಗೂ ಒಲಸರಿ ನಡೆಯಿತು. ಊರ ಹಾಗೂ ಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು.