ಕಾಸರಗೋಡು: ಟೈಪಿಸ್ಟ್ ಮತ್ತು ಆಫೀಸ್ ಅಟೆಂಡೆಂಟ್ ವಿಭಾಗದಲ್ಲಿ ತೆರವಾಗಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕೆಂಬ ಸರ್ಕಾರಿ ಆದೇಶದ ವಿರುದ್ಧ ಕೇರಳ ಎನ್. ಜಿ. ಓ. ಸಂಘದ ಸಿವಿಲ್ ಸ್ಟೇಶನ್ ಎದುರು ಪ್ರತಿಭಟನೆ ನಡೆಸಿತು.
ಗುತ್ತಿಗೆ ಆಧಾರದಲ್ಲಿ ನೇಮಕಾತಿ ಬಗ್ಗೆ ಜಾಯಿಂಟ್ ಕೌನ್ಸಿಲ್ ನಡೆಸುತ್ತಿರುವ ಪ್ರತಿಭಟನೆಯು ಗೊಂದಲಕ್ಕೆ ಕಾರಣವಾಗುತ್ತಿದೆ. ಎಡರಂಗದ ಭಾಗವಾಗಿರುವ ಸಿಪಿವೀ ನಿರ್ಧಾರವನ್ನು ಬೆಂಬಲಿಸುತ್ತಿದ್ದರೆ ಇನ್ನೊಂದೆಡೆ ಅವರದೇ ಆದ ನಾಗರಿಕ ಸೇವಾ ಸಂಘಟನೆಯು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಂತಹ ದ್ವಂದ್ವ ನಿಲುವು ಕೈಬಿಟ್ಟು ಸಿಬ್ಬಂದಿಯ ಸಂರಕ್ಷಣೆಗೆ ಮುಂದಾಗಬೇಕು ಹಾಗೂ ನಾಗರಿಕ ಸೇವೆಯನ್ನು ದುರ್ಬಲಗೊಳಿಸುವ ಇಂತಹ ಆದೇಶವನ್ನು ಹಿಂಪಡೆಯಬೇಕು ಎಂದು ಎನ್‍ಜಿಓ ಸಂಘ ಜಿಲ್ಲಾಧ್ಯಕ್ಷ ಕೆ.ರಂಜಿತ್ ತಿಳಿಸಿದರು.
ಸಿವಿಲ್ ಸ್ಟೇಶನ್ ವಠರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೆ ಸುನಿಲ್. ಪಿ.ಸಿ, ರವಿಕುಮಾರ್, ಪೀತಾಂಬರನ್, ರವೀಂದ್ರನ್ ಕೋಟೋಡಿ, ರಘುನಾಥನ್ ಮತ್ತು ಆಂಜನೇಯನ್ ನೇತೃತ್ವ ನೀಡಿದರು.