ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕದ ಆಶ್ರಯದಲ್ಲಿ ವಾಚನಾ ವಸಂತ ಎಂಬ ವಿನೂತನ ಪದ್ಧತಿಯು ಶನಿವಾರ ನಡುಮನೆ ಶ್ರೀಪ್ರಸಾದದಲ್ಲಿ ಉದ್ಘಾಟನೆಗೊಂಡಿತು. ನಡುಮನೆ ಮಾಧವ ಭಟ್, ಯಶೋದಾ ಮಾಧವ ಭಟ್, ವಾರ್ಡು ಸದಸ್ಯ ಕೃಷ್ಣ ಶರ್ಮ ಜಿ., ವೈ ಕೆ ಗಣಪತಿ ಭಟ್, ಗಣರಾಜ ಏತಡ್ಕ, ಚಂದ್ರಶೇಖರ ಏತಡ್ಕ, ಡಾ. ವೇಣುಗೋಪಾಲ್ ಕಳೆಯತ್ತೋಡಿ, ಉದಯಶಂಕರ ಭಟ್ ಸಿ, ಅಚ್ಚುತ ಭಟ್ ನಡುಮನೆ, ಗ್ರಂಥಪಾಲಕಿ ಶಾಂತಕುಮಾರಿ, ಛಾಯಾಗ್ರಾಹಕ ಕಾರ್ತಿಕ್ ಕುಮಾರ್ ಕೆ, ಜಯಪ್ರಕಾಶ್ ನೆಡುಮನೆ, ದೀಪಾ ನಡುಮನೆ, ಕುಮಾರಿಯರಾದ ಪೂರ್ಣಶ್ರೀ ಹಾಗೂ ಪ್ರಾರ್ಥನಾ ನಡುಮನೆ, ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಮಾತನಾಡಿ ಗ್ರಂಥಾಲಯದ ಆಶ್ರಯದಲ್ಲಿ ಮನೆ ಮನೆಗೆ ಪುಸ್ತಕಗಳನ್ನು ಹಂಚುವ ವಿನೂತನ ವಾಚನಾ ವಸಂತ ಪದ್ಧತಿಯನ್ನು ವಿವರಿಸಿದರು. ಗ್ರಂಥಪಾಲಕಿ ಪುಸ್ತಕವನ್ನು ಹಸ್ತಾಂತರಿಸಿದರು. ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭÀಟ್ ಶುಭಹಾರೈಸಿದರು. ಪೂರ್ಣಶ್ರೀ ಹಾಗೂ ಪ್ರಾರ್ಥನಾ ನಡುಮನೆ ಪ್ರಾರ್ಥಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಸ್ವಾಗತಿಸಿ, ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ ವಂದಿಸಿದರು.