ಕಾಸರಗೋಡು: ಯಕ್ಷಗಾನ ಮತ್ತು ಚೆಂಡೆ-ಮದ್ದಲೆ ಕಲಾವಿದ, ಯಕ್ಷ ಗುರು ಬಿ. ಗೋಪಾಲಕೃಷ್ಣ ಕುರುಪ್ (90) ಕಾಸರಗೊಡಿನ ನೀಲೇಶ್ವದ ಪಟ್ಟೇನದಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಕೇರಳ ಮೂಲದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ನೆಲೆಸಿದ್ದರು.
ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ವಾದಕರಾಗಿ, ಆರು ದಶಕಕ್ಕೂ ಅಧಿಕಕಾಲ ಹಿಮ್ಮೇಳ ಶಿಕ್ಷಣ ನೀಡಿ ಅನೇಕ ಶಿಷ್ಯರನ್ನು ಹೊಂದಿರುವ ಹಿರಿಯ ಯಕ್ಷಗಾನ ಗುರು ಬಿ.ಗೋಪಾಲಕೃಷ್ಣ ಕುರುಪ್(90)ಕಾಸರಗೋಡು ನೀಲೇಶ್ವರದ ಪಟ್ಟೇನಂನ ಪುತ್ರಿ ಮನೆಯಲ್ಲಿ ನಿಧನರಾದರು.
ತೆಂಕುತಿಟ್ಟು ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಅಪರ ಜ್ಞಾನ ಹೊಂದಿದ್ದ ಅವರು ಹಿಮ್ಮೇಳ ವಾದನದ ಕುರಿತು( ಮಧ್ಯಳೆ ವಾದನ ಕ್ರಮ) ಕೃತಿ ರಚಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸನ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳದ ಗುರುಪೂಜಾ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪಡೆದಿರುವ ಅವರು ಯಕ್ಷಗಾನ ಕಲಾರಂಗದ ಪ್ರಶಸ್ತಿಗೂ ಭಾಜನರಾಗಿದ್ದರು. ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್ ಅವರು ಆಸುಪಾಸಿನ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಖ್ಯಾತಿ ಪಡೆದಿದ್ದಾರೆ. ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.
ಕೇರಳ ಮೂಲದವರಾದ ಬಿ.ಗೋಪಾಲಕೃಷ್ಣ ಕುರುಪ್ ಅವರ ಹಿರಿಯರು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದವರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚಿನ ಕೆಲವು ವರ್ಷಗಳಿಂದ ನಿಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನದ ಕಲಾರಂಗದ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಜರಗಿದ ಕೋಳ್ಯೂರು ರಾಮಚಂದ್ರ ರಾವ್-90ರ ಸಂಭ್ರಮಕ್ಕಾಗಿ ನಿಲೇಶ್ವರದ ಮನೆಯಲ್ಲಿಯೇ ಗೋಪಾಲಕೃಷ್ಣ ಕುರುಪ್ ಅವರ ಅಭಿನಂದನೆಯ ನುಡಿಗಳನ್ನು ದಾಖಲಿಸಲಾಗಿತ್ತು. ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.
ಚಂಡೆ ಮತ್ತು ಮದ್ದಲೆಯ ತಾಳ-ಲಯವನ್ನು ಮೈಗೂಡಿಸಿಕೊಂಡಿದ್ದ ಕುರುಪ್ ಅವರು ತೆಂಕು ತಿಟ್ಟಿನಲ್ಲಿ ಲಭ್ಯವಿರುವ ಅಧಿಕೃತ ಪಠ್ಯವನ್ನು ಬಳಸಿ ಪುಸ್ತಕಗಳನ್ನು ಬರೆದಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ್ದರು. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿ ಹೆಸರು ಗಳಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಸರ್ಕಾರದ 'ಗುರುಪೂಜ' ಪುರಸ್ಕಾರ ಲಭಿಸಿದೆ. ಕುರುಪ್ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ ಪಟ್ಟೇನದ ಪಾಲಕ್ಕುಳಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.