ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವರ ಬ್ರಹ್ಮಕಲಶಾಭಿಷೇಕ ಮಾರ್ಚ್ 1ರಿಂದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಆರಂಭಗೊಂಡು ಭಾನುವಾರ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕಗಳೊಂದಿಗೆ ಸಂಪನ್ನಗೊಂಡಿತು.
ಪ್ರಾತಃಕಾಲ 6 ಕ್ಕೆ ಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ ಪ್ರಾಯಶ್ಚಿತ್ತ ಮತ್ತು ತತ್ವ ಹೋಮಗಳ ಕಲಶಾಭಿಷೇಕ, 1008 ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿ ಹಾಗೂ ಸಹಸ್ರಾರು ಸಂಖ್ಯೆ ಭಕ್ತರ ಸಮ್ಮುಖ ನೆರವೇರಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ 6ರಿಂದ ಕಾರ್ಮಾರು ಶ್ರೀ ವಿಷ್ಣುಲೀಲಾ ಮೈದಾನದಲ್ಲಿ ಶ್ರೀ ಮಹಾವಿಷ್ಣು ಯುವಕ ವೃಂದ ಕಾರ್ಮಾರು ಪ್ರಾಯೋಜಕತ್ವದಲ್ಲಿ `ಕಾರ್ಮಾರು ಉತ್ಸವ 2025' ಮೆಗಾಗಾನಮೇಳ, 7 ಕ್ಕೆ ಶ್ರೀದೇವರ ಉತ್ಸವ ಬಲಿ, 7.15ರಿಂದ ಮಹಿಳಾ ಸಂಘ ಕಾರ್ಮಾರು ತಂಡದಿಂದ ತಿರುವಾದಿರ ಪ್ರದರ್ಶನ, 7.30ರಿಂದ ಕಾರ್ಮಾರು ಶ್ರೀ ವಿಷ್ಣುಲೀಲಾ ಮೈದಾನದ ಬೆಡಿಕಟ್ಟೆಯಲ್ಲಿ ಶ್ರೀದೇವರ ಪೂಜೆ, ಸುಡುಮದ್ದು ಪ್ರದರ್ಶನ, 11.30ರಿಂದ ಶ್ರೀಕ್ಷೇತ್ರದಲ್ಲಿ ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಜೆ 3.30ರಿಂದ ನಡೆದ ಸಮಾರೋಪ ಸಮಾರಂಭ ನಡೆಯಿತು.