ಉಪ್ಪಳ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬಾಯಾರು ಶಾಖೆಯ ಸಕ್ರಿಯ ಸದಸ್ಯ ಮೋರಿಸ್ ಟೆಲ್ಲಿಸ್ ಮೀಯಪದವು ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್) ಧನಸಹಾಯ 50,000 ರೂ. (ರೂ. ಐವತ್ತು ಸಾವಿರ) ಮೊತ್ತದ ಚೆಕ್ ನ್ನು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಬುಧವಾರ ಫಲಾನುಭವಿಯ ಪತ್ನಿ ಸೆಲಿಸ್ಟಿನಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರುಗಳಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬಾಲಕೃಷ್ಣ ರೈ. ಬಾನೊಟ್ಟು, ಕ್ಯಾಂಪ್ಕೋ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖೆಯ ಪ್ರಬಂಧಕÀ ರಮೇಶ್, ಸದಸ್ಯ ಬ್ರೀಜೇಶ್ ಮೀಯಪದವು ಉಪಸ್ಥಿತರಿದ್ದರು.