ವಿಶೇಷ ಪೊಲೀಸ್ ಅಧಿಕಾರಿ ಭರತ್ ಚಲೋತ್ರಾ, ಡಿಎಸ್‌ಪಿ ಧೀರಜ್ ಕಟೋಚ್ ಮತ್ತು ಒಬ್ಬ ಪ್ಯಾರಾ ಕಮಾಂಡೊ ಸೇರಿದಂತೆ ಕೆಲವು ಪೊಲೀಸರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಉಧಂಪುರ ಮತ್ತು ಪಠಾಣ್‌ಕೋಟ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್‌ಬಾಘ್‌ನ ಘಟಿ ಜುಥಾನಾ ಪ್ರದೇಶದ ಜಾಖೋಲ್ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಗುಂಡಿನ ಚಕಮಕಿ ಆರಂಭವಾಗಿದೆ. ಹಿರಾನಗರ್‌ನಲ್ಲಿ ಭಾನುವಾರ ನಡೆದಿದ್ದ ಗುಂಡಿನ ಚಕಮಕಿ ಸಂದರ್ಭದಲ್ಲಿ ಪರಾರಿಯಾಗಿದ್ದ ಅದೇ ಉಗ್ರರ ತಂಡ ಗುರುವಾರ ನಡೆದ ಸಂಘರ್ಷದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹೊಸದಾಗಿ ನಿರ್ಮಿಸಿರುವ ಸುರಂಗ ಅಥವಾ ಕಂದರವನ್ನು ಬಳಸಿಕೊಂಡು ಭಯೋತ್ಪಾದಕರು ಗಡಿಯಾಚೆಯಿಂದ ಒಳನುಸುಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ನೇತೃತ್ವದಲ್ಲಿ ಸೇನೆ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.