ಮಧೂರು: ಸಮಾಜದ ಅತ್ಯಂತ ಕಟ್ಟಕಡೆಯ, ಭಕ್ತಿಯ ಮೇರುವಾಗಿದ್ದ ಮದರುವಿಗೆ ಒಲಿದ ಮಧೂರು ಮಹಾಗಣಪತಿ ಸಾನ್ನಿಧ್ಯ ಇಂದು ಸಕಲರ ಆರಾಧನಾಲಯವಾಗಿ ತುಳುನಾಡಿನಲ್ಲಿ ಮಹತ್ತರ ಸ್ಥಾನ ಪಡೆದು ಮೆರೆಯುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗಳು ಎಷ್ಟಿದ್ದರೂ, ಧಾರ್ಮಿಕ ಶಿಕ್ಷಣದ ಕೊರತೆ ಇಂದು ಕಾಡುತ್ತಿದೆ. ಈ ನಿಟ್ಟಿನಲ್ಲಿ ಮಧೂರಿನಂತಹ ಶ್ರದ್ಧಾಕೇಂದ್ರಗಳು ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀವಚನ ನೀಡಿದರು.
ಸಮಾಜವನ್ನು ಕಾಡುವ ವಿಕೃತಿಯನ್ನು ಮೀರಿ ಸುಕೃತಿಯ ಬದುಕು, ಸಮೃದ್ಧ ಜೀವನ ಕಾಪಿಡುವಲ್ಲಿ ಮದರುವಿಗಿದ್ದ ಭಕ್ತಿ ನಮ್ಮ ಹೃದಯದಲ್ಲಿ ಅರಳಬೇಕು. ನಮ್ಮ ಗಳಿಕೆಯ ಒಂದಂಶವನ್ನು ಬಡಬಗ್ಗರಿಗೆ, ಧರ್ಮ ಕಾರ್ಯಗಳಿಗೆ ಮೀಸಲಿಟ್ಟಾಗ ಬದುಕು ಸಾಥ್ರ್ಯಕ್ಯ ಭಾವ ಒಡಮೂಡುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಭಕ್ತಿ ಮಾರ್ಗದ ಮೂಲಕ ಮೌಲ್ಯವನ್ನು ಉಳಿಸಿ ಬೆಳೆಸುವ ಶಕ್ತಿ ಮಧೂರಿಗಿದೆ.. ಎಲ್ಲರೊಳಗೊಂದಾಗಿ ಬದುಕುವ, ಬದುಕಿನ ಸೂಕ್ಷ್ಮತೆಗಳನ್ನು ಗ್ರಹಿಸಿ ಸುಖಮಯವಾಗಿ ಬದುಕುವ ಶಕ್ತಿ ಮಹಾಗಣಪತಿಯ ಅನುಗ್ರಹದಿಂದ ಪ್ರಾಪ್ತಿಯಾಗುವುದೆಂದು ಅವರು ಆಶೀವರ್ಚನದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಮಯಂಗರ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಟ್ರಸ್ಟಿ ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. ಕಾವು ಮಠದ ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಪಟ್ಟೇರಿ ಉಪಸ್ಥಿತರಿದ್ದು ಮಾತನಾಡಿದರು. ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪವಿತ್ರಪಾಣಿ ಡಾ. ವಿಕ್ರಂ ಇರ್ನಿರಾಯ,ಕೆ.ಎಸ್.ಬಿ. ನಿದೇಶಕ ಸುರೇಂದ್ರ ಕೆ., ಕೂಡ್ಲು ಶ್ರೀಗೋಪಾಲಕೃಷ್ಣ ದೇವಾಲಯದ ಆಡಳಿತ ಮೊಕ್ತೇಸರ ಕೆ.ಜಿ.ಶಾನುಭೋಗ, ಮುಳಿಯಾರು ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ಐಲ ಬೋವಿ ಶಾಲೆಯ ಅಧ್ಯಕ್ಷ ಆನಂದ ಕೋಟ್ಲು ಉಪಸ್ಥಿತರಿದ್ದು ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾಯದಶಿ ಕೃಷ್ಣಪ್ರಸಾದ ಕೋಟೆಕಣಿ ಸ್ವಾಗತಿಸಿ, ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ರಾಮ್ ಎಲ್ಲಂಗಳ ಕಾಯಕ್ರಮ ನಿರೂಪಿಸಿದರು.
ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ರಿಂದ ಅರಣಿ ಮಥನ, ಸಂಜೀವಿನೀ ಮಹಾಮೃತ್ಯುಂಜಯ ಯಾಗ, ಧಾರಾಂತ ಬಿಂಬ ಶುದ್ಧಿ, ಪ್ರಾಯಶ್ಚಿತ ಹೋಮಗಳು, ಶಾಂತಿಹೋಮಗಳು ನಡೆಯಿತು.