ಢಾಕಾ: ಅಮೆರಿಕದ ಗುಪ್ತಚರ ಸಂಸ್ಥೆಯ ನಿರ್ದೇಶಕಿ ತುಳಸಿ ಗಬಾರ್ಡ್ ಅವರು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ ಎಂದು ಹೇಳಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಬಾಂಗ್ಲಾದೇಶ ಪ್ರತಿಕ್ರಿಯಿಸಿದೆ.
'ಗಬಾರ್ಡ್ ಅವರ ಹೇಳಿಕೆಯು ಅಸೂಕ್ಷ್ಮ ಮತ್ತು ಅನ್ಯಾಯದ ಕುಂಚದಲ್ಲಿ ಇಡೀ ದೇಶಕ್ಕೆ ಬಣ್ಣ ಬಳಿದಂತಿದೆ.
ಬಾಂಗ್ಲಾದೇಶದ ವರ್ಚಸ್ಸು ಮತ್ತು ಘನತೆಗೆ ಧಕ್ಕೆ ತಂದಿದೆ' ಎಂದು ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರ ಕಚೇರಿಯು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದೆ.
ಬಾಂಗ್ಲಾದೇಶವನ್ನು ಯಾವುದೇ ರೀತಿಯ 'ಇಸ್ಲಾಂ ಮೂಲಭೂತ'ವಾದದ ಜೊತೆ ತಳಕುಹಾಕುವ ಪ್ರಯತ್ನವನ್ನು ದೇಶವು ಬಲವಾಗಿ ಖಂಡಿಸುತ್ತದೆ ಎಂದು ಅದು ಹೇಳಿದೆ.
ರಾಜಕೀಯ ನಾಯಕರು ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆ ನೀಡುವಾಗ ಜಾಗರೂಕರಾಗಿರಬೇಕು ಎಂದು ಕಟುವಾಗಿ ಹೇಳಿದೆ.