ಮಧೂರು: ಶಿವರಾತ್ರಿಯಂಗವಾಗಿ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ ವಾದನ ಜರಗಿತು. ಹಾಡುಗಾರಿಕೆಯಲ್ಲಿ ಸರಸ್ವತಿ ಕೃಷ್ಣನ್ ಕುಮಾರಮಂಗಲ, ವಯಲಿನ್ ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶ್ರೀವಿದ್ಯಾ, ಮೃದಂಗದಲ್ಲಿ ಕೆ. ಶ್ರೀಧರ ರೈ ಸಹಕರಿಸಿದರು. ಅಮೃತ ಕಲಾಕ್ಷೇತ್ರ ರಾಮದಾಸನಗರ ತಂಡದಿಂದ ಶಾಸ್ತ್ರೀಯ ನೃತ್ಯ, ಪರಕ್ಕಿಲ ಬಾಲಗೋಕುಲ ಮತ್ತು ಪರಕ್ಕಿಲ ಅಂಗನವಾಡಿ ಮಕ್ಕಳಿಂದ ನೃತ್ಯ, ತರುಣಕಲಾವೃಂದ ಮಹಿಳಾ ಸದಸ್ಯೆಯರಿಂದ ತಿರುವಾದಿರ ಫ್ಯೂಶನ್, ಶ್ರೀರಕ್ಷಾ ರಾಮ್ ಕಿಶೋರ್ ಮತ್ತು ಧನ್ಯಮುರಳಿ ಆಸ್ರ ಅವರಿಂದ ಭರತನಾಟ್ಯ ಜರಗಿತು. ತರುಣ ಕಲಾವೃಂದ ಉಳಿಯ ಮತ್ತು ಕುಟುಂಬಶ್ರೀ ಪರಕ್ಕಿಲ ಸಹಕಾರ ನೀಡಿದ್ದರು.