ಪೆರ್ಲ: ಎಣ್ಮಕಜೆ ತರವಾಡುಮನೆ ಶ್ರೀ ಪಿಲಿಚಾಮುಂಡಿ, ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಅಂಗವಾಗಿ ಸೋಮವಾರ ಪ್ರತಿಷ್ಠಾ ದಿನಾಚರಣೆ ನಡೆಯಿತು. ಬೆಳಗ್ಗೆ ಮಧುಸೂಧನ ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಸಂಜೆ ಬೆದ್ರಂಪಳ್ಳ ಶ್ರೀ ಗಣೇಶ ಭಜನಾ ಸಂಘದಿಂದ ಭಜನೆ, ನಂತರ ಹರಿಸೇವೆ ನಡೆಯಿತು.
4ರಂದು ಮಧ್ಯಾಹ್ನ 12ಕ್ಕೆ ದರ್ಮದೈವ ಪಿಲಿಚಾಮುಂಡಿ ದೈವದ ನೇಮ, ರಾತ್ರಿ ಸತ್ಯದೇವತೆ, ಕೊರತಿ, ಗುಳಿಗ ನೇಮ, 5ರಂದು ಬೆಳಗ್ಗೆ 7ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ ನಡೆಯುವುದು.