ಸೋಲ್: ವಾಗ್ದಂಡನೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಜೈಲಿನಿಂದ ಶನಿವಾರ ಬಿಡುಗಡೆ ಮಾಡಲಾಗಿದೆ.
ಸೋಲ್ ಕೇಂದ್ರ ಜಿಲ್ಲಾ ನ್ಯಾಯಾಲಯವು, ಯೋಲ್ ಅವರ ಬಂಧನವನ್ನು ರದ್ದುಪಡಿಸಿ ಆದೇಶಿಸಿತ್ತು. ಜೊತೆಗೆ, ಬಂಧನಕ್ಕೆ ಒಳಗಾಗದೇ ಯೋಲ್ ಅವರು ವಿಚಾರಣೆ ಎದುರಿಸಲು ಸಹ ನ್ಯಾಯಾಲಯ ಅನುಮತಿ ನೀಡಿತ್ತು.
ಈ ಬೆಳವಣಿಗೆಯ ಮಾರನೇ ದಿನವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ದೇಶದಲ್ಲಿ ಸೇನಾ ಆಡಳಿತ ಹೇರಿದ್ದಕ್ಕಾಗಿ ಯೋಲ್ ಅವರನ್ನು ಪದಚ್ಯುತಗೊಳಿಸಿ, ಅವರನ್ನು ವಾಗ್ದಂಡನೆಗೆ ಗುರಿ ಮಾಡಲಾಗಿತ್ತು.