ಕಾಸರಗೋಡು: ರಾಮರಾಜ ಕ್ಷತಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಉಪಸಂಘ ಕೂಡ್ಲು ಇದರ ವಾರ್ಷಿಕ ಮಹಾಸಭೆ ಕೂಡ್ಲು ಉಪಸಂಘದ ಅಧ್ಯಕ್ಷ ಬಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಎಎಸ್‍ಐ ಪುರುಷೋತ್ತಮ ಕೂಡ್ಲು ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಜಿಲ್ಲಾ ಸಂಘದ ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲಾಸಂಘದ ವತಿಯಿಂದ ಕೊಡಮಾಡುವ ಸವಲತ್ತುಗಳನ್ನು, ಸಮಾಜದ ಅವಕಾಶಗಳನ್ಮು ಸರ್ಕಾರದಿಂದ ಪಡೆಯುವಲ್ಲಿ, ಇತರ ಸಮಾಜದವರಿಂದ ಗೌರವ ಪಡೆಯುವಲ್ಲಿ ನಮ್ಮಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದರು. ಉಪಸಂಘದ ಕಾರ್ಯದರ್ಶಿ ಚಂದ್ರಶೇಖರ ಮಾಸ್ತರ್ ಅವರು 2024-25 ನೇ ವರ್ಷದ ವರದಿಯನ್ನೂ ಕೋಶ„ಕಾರಿ ಕೆ.ಸತೀಶ್ ಅವರು ಆಡಿಟ್ ಮಾಡಿದ ಲೆಕ್ಕಪತ್ರವನ್ನು ಮಂಡಿಸಿದರು. ಚರ್ಚಿಸಿದ ಬಳಿಕ ಸ`Éಯು ಸರ್ವಾನುಮತದಿಂದ ಅಂಗೀಕರಿಸಿತು.
ಕೂಡ್ಲು ಉಪಸಂಘದ ಸದಸ್ಯರ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿರುವವರಿಗೆ ನಗದು ಮತ್ತು ನೆನಪಿನ ಕಾಣಿಕೆಯನ್ನು ಉಪಸಂಘದ ಕಾರ್ಯದರ್ಶಿಯವರು ವಿತರಿಸಿದರು ಜಿಲ್ಲಾ ಸಂಘದಿಂದ ಕೊಡಮಾಡಿದ ಉಗಾದಿ ಉಡುಗೊರೆಯನ್ನು ಮುಖ್ಯ ಅತಿಥಿಯವರಾದ ಪುರುಷೋತ್ತಮ ಕೂಡ್ಲುರವರು ವಿತರಿಸಿದರು. ಜಿಲ್ಲಾ ಸಂಘದಿಂದ ಕೊಡಮಾಡಿದ ವೈದ್ಯಕೀಯ ಸಹಾಯವನ್ನು ರಾಜೇಂದ್ರ ಅವರಿಗೆ ಉಪಸಂಘದ ಅಧ್ಯಕ್ಷ ಬಿ.ಸತೀಶ ಅವರು ಹಸ್ತಾಂತರ ಮಾಡಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನವನ್ನು ಸತೀಶ್ ಕೆ. ನೀಡಿದರು. ವಿಶೇಷ ಚೇತನರಾದ ಒಬ್ಬರಿಗೆ ಉಪಸಂಘದ ವತಿಯಿಂದ ಉಗಾದಿ ಉಡುಗೊರೆಯನ್ನು ರಾಜೇಂದ್ರರವರು ನೀಡಿದರು. ಚಂದ್ರಶೇಖರ ಮಾಸ್ತರ್ ಸ್ವಾಗತಿಸಿದರು. ದರ್ಶನ ವಂದಿಸಿದರು.