ಕೈರೊ: 'ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಕಾರಿಡಾರ್‌ನಲ್ಲಿ ಸೇನೆ ಹಾಗೂ ಸರಕು ಸಾಗಣೆಯ ಹಡಗುಗಳ ಮೇಲೆ ಯೆಮನ್‌ನ ಹುಥಿ ಬಂಡುಕೋರರು ದಾಳಿ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕ ವಾಯುಸೇನೆಯು ಪ್ರತಿದಾಳಿ ದಾಳಿ ನಡೆಸಿದದ್ದು, ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ.
'ಯಾವ ಹಡಗು ಹೋಗಬೇಕು ಅಥವಾ ಹೋಗಬಾರದು ಎಂಬುದನ್ನು ಕೆಲವು ಜನರಿಗೆ ನಿಯಂತ್ರಿಸಲು ಬಿಡುವುದಿಲ್ಲ. ಅಂತಹ ಕ್ರಮಗಳಿಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ' ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು 'ಸಿಬಿಎಸ್' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ದಾಳಿಯಲ್ಲಿ ಹುಥಿ ಸಂಘಟನೆಗೆ ಸೇರಿದ ಪ್ರಮುಖ ಕೇಂದ್ರಗಳನ್ನು ನಾಶಗೊಳಿಸಲಾಗಿದೆ' ಎಂದು ತಿಳಿಸಿದ್ದಾರೆ.
'ವಾಸ್ತವವಾಗಿ ಹಲವಾರು ಹುಥಿ ನಾಯಕರನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದು, ಅವರೆಲ್ಲರೂ ಹತರಾಗಿದ್ದಾರೆ' ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ತಿಳಿಸಿದ್ದಾರೆ. ಆದರೆ, ಸತ್ತವರ ಹೆಸರು, ಸಾಕ್ಷ್ಯಗಳನ್ನು ಒದಗಿಸಿಲ್ಲ.