ಕಾಸರಗೋಡು: ಕೇರಳ ಸರ್ಕಾರಿ ಸವಾಮ್ಯದ ಸಂಸ್ಥೆಯಾದ ಕೇರಳ ಸ್ಟೇಟ್ ರೂಟ್ರೋನಿಕ್ಸ್ ಪ್ರಮಾಣಪತ್ರದೊಂದಿಗೆ ಒಂದು ವರ್ಷ, ಆರು ತಿಂಗಳು ಮತ್ತು ತಿಂಗಳ ಕಾಲಾವಧಿಯ ಲಾಜಿಸ್ಟಿಕ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗಳಲ್ಲಿ ತಿರುವನಂತಪುರ, ಅಟ್ಟಿಂಗಲ್‍ನಲ್ಲಿ ಅಂಗೀಕೃತ ಅಧ್ಯಯನ ಕೇಂದ್ರಗಳಿಗೆ ಇಂಟರ್ನ್‍ಶಿಪ್‍ನೊಂದಿಗೆ ನಿಯಮಿತ ಅರೆಕಾಲಿಕ ಬ್ಯಾಚ್‍ಗಳಿಗಾಗಿ ಅರ್ಜಿಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪ್ಲಸ್ ಟು ಮತ್ತು ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ (7994926081)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.