ತಿರುವನಂತಪುರಂ: ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಐಒಸಿ ಡಿಜಿಎಂ ಅಲೆಕ್ಸ್ ಮ್ಯಾಥ್ಯೂ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಐಒಸಿ ಆದೇಶಿಸಿದೆ ಎಂದು ವರದಿಯಾಗಿದೆ.
ಕೊಚ್ಚಿಯಲ್ಲಿರುವ ಅಲೆಕ್ಸ್ ಮ್ಯಾಥ್ಯೂ ಅವರ ಮನೆಯಿಂದ ವಿಜಿಲೆನ್ಸ್ 4 ಲಕ್ಷ ರೂ. ಮತ್ತು ಏಳು ಬಾಟಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದೆ. ಹಣಕಾಸಿನ ವಹಿವಾಟಿನ ಕೆಲವು ದಾಖಲೆಗಳು ಸಹ ಪತ್ತೆಯಾಗಿವೆ. ಏತನ್ಮಧ್ಯೆ, ಬಂಧನದಲ್ಲಿದ್ದಾಗ ಅಸ್ವಸ್ಥರಾದ ಅಲೆಕ್ಸ್ ಮ್ಯಾಥ್ಯೂ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶೇx ತನಿಖಾ ಘಟಕದ ಉಪ ಪೋಲೀಸ್ ವರಿಷ್ಠಾಧಿಕಾರಿ ನೇತೃತ್ವದ ಜಾಗೃತ ತಂಡವು ನಿನ್ನೆ ರಾತ್ರಿ 7.30 ರ ಸುಮಾರಿಗೆ ಕುರವಂಕೋಣಂನಲ್ಲಿರುವ ದೂರುದಾರರ ಮನೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಅಲೆಕ್ಸ್ ಮ್ಯಾಥ್ಯೂ ಅವರನ್ನು ಬಂಧಿಸಿತು.