ಕಾಸರಗೋಡು : ಸಾಧಕರಿಗೆ ಹಾಗೂ ಸ್ಪರ್ಧಾ ವಿಜೇತರಿಗೆ ನಡೆಸುವ ಗೌರವಾದರಗಳು ಸನ್ಮಾನಿತರಿಗೆ ಹಾಗೂ ಇತರ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗುವುದಾಗಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಂಘ ಉಪಾಧ್ಯಕ್ಷೆ ಉಶಾಕಿರಣ್ ಹೇಳಿದರು.
ಅವರು ಕಾಸರಗೋಡು ಕನ್ನಡ ಭವನದಲ್ಲಿ "ಮಂಗಳೂರು ವಿಶ್ವ ವಿದ್ಯಾಲಯ 2023-24 ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಷಯದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕದೊಂದಿಗೆ ಪಡೆದ ಕಾಸರಗೋಡು ಜಿಲ್ಲೆಯ ಚಿತ್ತಾರಿಯ ಗಿರೀಶ್ ಪಿ. ಎಂ. ಅವರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಮರಾಜ ಕ್ಷತ್ರಿಯ ಕೂಡ್ಲು ಉಪಸಂಘ ಅಧ್ಯಕ್ಷ ಸತೀಶ್ ಕೂಡ್ಲು, ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಘಟನಾ ಕಾರ್ಯದರ್ಶಿ ಸಂದ್ಯಾ ರಾಣಿ ಟೀಚರ್, ಎಡನೀರು ಹೈಯರ್ ಸೆಕೆಂಡರಿ ಅಧ್ಯಾಪಕ ಪ್ರವೀಣ್ ಶೆಟ್ಟಿ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ವಿಜೇತರನ್ನು ಅಭಿನಂದಿಸಿದರು. ಕನ್ನಡ ಭವನದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂದ್ಯಾ ರಾಣಿ ಟೀಚರ್ ವಂದಿಸಿದರು.