ಮಂಜೇಶ್ವರ: ಕೊಡ್ಲಮೊಗರು ಪಿಲಿಕುಂಡ ಕೂಟೇಲು ಶ್ರೀ ವಾರಾಹಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವ ಮಾ 11ರಂದು ಜರುಗಲಿದೆ. ಮಾ. 10ರಂದು ರತ್ರಿ 8ಕ್ಕೆ ಭಂಡಾರ ಏರುವುದರೊಂದಿಗೆ 11ರಂದು ಬೆಳಗ್ಗೆ 10ಕ್ಕೆ ಶ್ರೀ ಮಲರಾಯ ದೈವದ ನೇಮ, ಸಂಜೆ 7ಕ್ಕೆ ಬಾಲಗೋಕುಲ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ 10ಕ್ಕೆ ಶ್ರೀ ಪಿಲಿಚಾಮುಂಡಿ ದಯವದ ಓಲಸರಿ ನೇಮೋತ್ಸವ ನಡೆಯುವುದು.
ಮಾ. 14ರಂದು ದೈವಸ್ಥಾಣದಲ್ಲಿ ವರ್ಷಾವಧಿ ಶ್ರೀ ಸತ್ಯಗಣಪತಿ ದೇವರ ಪೂಜೆ ನಡೆಯುವುದಾಗಿ ಪ್ರಕಟಣೆ ತಿಳಿಸಿದೆ.