ಮಂಗಳೂರು: ಬೇಸಿಗೆ ದಟ್ಟಣೆ ನಿರ್ವಹಿಸಲು ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ತಿರುವನಂತಪುರಂ ನಾರ್ತ್ ಮಧ್ಯೆ ವಿಶೇಷ ರೈಲು ಸಂಚರಿಸಲಿದೆ.
ನಂ.01063 ಹಬ್ಬ ವಿಶೇಷ ರೈಲು ಏ.3ರಿಂದ ಮೇ 29 ರ ವರೆಗೆ ಗುರುವಾರದಂದು ಸಂಜೆ 4ಕ್ಕೆ ಹೊರಟು ಮರುದಿನ ರಾತ್ರಿ 10.45 ತಿರುವನಂತಪುರಂ ನಾರ್ತ್ ತಲುಪಲಿದೆ.
ನಂ.01064 ತಿರುವನಂತಪುರಂ ನಾರ್ತ್-ಲೋಕಮಾನ್ಯ ತಿಲಕ್ ಹಬ್ಬ ವಿಶೇಷ ರೈಲು ತಿರುವನಂತಪುರಂ ನಾರ್ತ್‌ನಿಂದ ಏ.5 ರಿಂದ ಮೇ 31ರವರೆಗೆ ಶನಿವಾರದಂದು ಸಂಜೆ 4.30 ಕ್ಕೆ ಹೊರಟು ಸೋಮವಾರದಂದು ಮಧ್ಯರಾತ್ರಿ 1 ಗಂಟೆ ಗೆ ಲೋಕಮಾನ್ಯ ತಿಲಕ್ ತಲುಪಲಿದೆ.
ಥಾಣೆ, ಪನ್ವೆಲ್, ಪೆನ್, ರೋಹ, ಖೇಡ್, ಚಿಪುÉನ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ್, ಕುಡಾಳ್, ಸಾವಂತವಾಡಿ, ತಿವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ, ಕುಮಟ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಝಿಕೋಡ್, ತಿರೂರುಗಳಲ್ಲಿ ಈ ರೈಲುಗಳಿಗೆ ನಿಲುಗಡೆ ಇರಲಿದೆ.