HEALTH TIPS

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸುತ್ತಿರುವ ಹಸಿರು ಸೇನಾ ಕಾರ್ಯಕರ್ತರು : ಸ್ಥಳೀಯರ ವ್ಯಾಪಕ ಆಕ್ರೋಶ

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಸಿರು ಸೇನಾ ಕಾರ್ಯಕರ್ತರು ಮನೆಗಳು ಹಾಗೂ ವಾಣಿಜ್ಯ ಕೇಂದ್ರಗಳಿಂದ ಶುಲ್ಕ ವಸೂಲಿ ಮಾಡಿ ಸಂಗ್ರಹಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸುವಲ್ಲಿಗೆ ತಲುಪಿಸದೆ ಸಂಗ್ರಹಿಸಲಾಗುತ್ತಿರುವ ಮನೆಯ ಅಥವಾ ವಾಣಿಜ್ಯ ಕೇಂದ್ರಗಳ 50 ಮೀಟರ್ ಅಂತರಗಳಲ್ಲಿ ಉಪೀಕ್ಷಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ತನಿಖೆ ನಡೆಸಬೇಕಾದ ಪಂಚಾಯತಿ ಅಧಿಕೃತರು ಗಾಢ ನಿದ್ರೆಗೆ ಜಾರಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸಲಾಗುತ್ತಿರುವ ಪ್ಯಾಸ್ಟಿಕ್ ತ್ಯಾಜ್ಯಗಳು ಭಾರೀ ಸಮಸ್ಯೆಗೂ ಕಾರಣವಾಗುತ್ತಿರುವುದರ ಜೊತೆತೆ ತ್ಯಾಜ್ಯಗಳನ್ನು ಶ್ವಾನಪಡೆ  ಎಳೆದಾಡಿ  ಪರಿಸರವನ್ನೇ ನಾಶಗೊಳಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಪಂಚಾಯತಿ ಸ್ವಚ್ಛತೆಯನ್ನು ಕಾಪಾಡಲು ಹಸಿರು ಸೇನಾ ಕಾರ್ಯಕರ್ತರಿಂದ ಮಾಡಿಸಲಾಗುತ್ತಿರುವ ಸೇವೆ ಇದೀಗ ಸಾರ್ವಜನಿಕರಿಗೆ ಶಾಪವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದೇ ಇರುವ ಕಾರಣ ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುವ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಲು ರಹದಾರಿಯೊದಗಿಸಿದೆ. .

ಇತ್ತೀಚೆಗೆ ಮಂಜೇಶ್ವರ ಚೌಕಿ, ತೂಮಿನಾಡು, ಕೆಲವು ಒಳ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯಗಳ ಮೂಟೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸಲಾಗಿತ್ತು. ಹಲವು ಬಾರಿ ಸ್ಥಳೀಯರು ಅಧಿಕೃತರಿಗೆ ಕರೆ ಮಾಡಿ ತಿಳಿಸಿದ ಬಳಿಕ ಅಧಿಕೃತರು ಎಚ್ಚೆತ್ತುಕೊಂಡಿದ್ದಾರೆಂದು ಸ್ಥಳೀಯರು ಆಡಿ ಕೊಳ್ಳುತಿದ್ದಾರೆ

ಪ್ರತಿಯೊಂದು ಸಣ್ಣ ವಿಷಯದಲ್ಲೂ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ದಂಡ ವಸೂಲಿಗೆ ಇಳಿದಿರುವ ಪಂಚಾಯತಿ ಅಧಿಕೃತರು ಹಸಿರು ಸೇನಾ ಕಾರ್ಯಕರ್ತರ ಬೇಜವಾಬ್ದಾರಿ ಕೆಲಸದ ಬಗ್ಗೆ ಯಾಕೆ ಮಾನವಾಗಿದ್ದಾರೆ ಎಂಬುದು ಇಲ್ಲಿಯ ಗ್ರಾಮಸ್ಥರ ಪ್ರಶ್ನೆ. ಸಂಬಂಧಪಟ್ಟವರು ಇದಕ್ಕೆ ಉತ್ತರಿಸಬೇಕಾಗಿದೆ ಇಲ್ಲವಾದರೆ ಇದನ್ನು ಪ್ರತಿಭಟಿಸುವ ದಿನ ದೂರವಿರಲಾರದೆಂಬುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.


ಅಭಿಮತ: 

 ಹಸಿರು ಸೇನಾ ಕಾರ್ಯಕರ್ತರು ಸಂಗ್ರಹಿಸಿದ ತ್ಯಾಜ್ಯಗಳನ್ನು ರಸ್ತೆಬದಿ ಗೋಣಿಚೀಲಗಳಲ್ಲಿ ಕಟ್ಟಿರಿಸುತ್ತಾರೆ. ಬಳಿಕ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನ ಬಂದು ವಿಲೇವಾರಿಗೊಳಿಸುತ್ತದೆ. ಆದರೆ ಪಂಚಾಯತಿಗೆ ಒಂದೇ ವಿಲೇವಾರಿ ವಾಹನವಿರುವುದರಿಂದ ಕಲೆವು ಸಂದರ್ಭ ಸಂಗ್ರಹಣೆಯ ವಿಕೇವಾರಿಯಲ್ಲಿ ತಡವಾಗುತ್ತದೆ. ಇದರಿಂದ ಶ್ವಾನಗಳು ಎಳೆದಾಡಿ ಸಮಸ್ಯೆ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ಮುಂದಿನ ಎರಡು ತಿಂಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಇನ್ನೊಂದು ವಾಹನ ಖರೀದಿಸಲಾಗುತ್ತಿದ್ದು, ಸಾರ್ವಜನಿಕೆರು ಸಹಕರಿಸಬೇಕು.

                                  -ಜೀನ್ ಲವಿನೋ ಮೊಂತೇರೊ

                                    ಅಧ್ಯಕ್ಷೆ. ಮಂಜೇಶ್ವರ ಗ್ರಾಮ ಪಂಚಾಯತಿ.     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries